ಜಿಲ್ಲೆ

1.43 ಲಕ್ಷ ರೂ.ಉಳಿತಾಯ ಬಜೆಟ್ ಮಂಡನೆ

ಕುರುವತ್ತಿ ಶ್ರೀಕಾಂತಪ್ಪ

ಮುದಗಲ್: ಪುರಸಭೆಯಲ್ಲಿ 2023-24ನೇ ಸಾಲಿನಲ್ಲಿ 1.43 ಲಕ್ಷ ರೂ.ಉಳಿತಾಯ ಬಜೆಟ್ ಮಂಡನೆ ಮಾಡಲಾಯಿತು. ಅಧ್ಯಕ್ಷೆ ರಾಬಿಯಾಬೇಗಂ ಹುಸೇನ ಅಲಿ ಅಧ್ಯಕ್ಷತೆಯಲ್ಲಿ ಸೋಮವಾರ ಜರುಗಿದ ಸಭೆಯಲ್ಲಿ, ನೈರ್ಮಲ್ಯ ನಿರೀಕ್ಷಕಿ ಆರೀಫಾಬೇಗಂ ಬಜೆಟ್ ಕುರಿತು ವಿವರಣೆ ಸಭೆಗೆ ಒಪ್ಪಿಸುವ ಮೂಲಕ ಅನುಮೋದನೆ ಪಡೆದರು.

ಪುರಸಭೆಗೆ ವಾಣಿಜ್ಯ ಮಳಿಗೆಗಳ ಬಾಡಿಗೆ, ಕಟ್ಟಡ ಪರವಾನಗೆ, ಆಭಿವೃದ್ಧಿ ಶುಲ್ಕ, ನೀರಿನ ಶುಲ್ಕ, ಖಾತಾ ವರ್ಗಾವಣೆ ಶುಲ್ಕ, ಇತರ ಶುಲ್ಕಗಳಿಂದ ಸಂಗ್ರಹವಾಗುವ 19.27 ಕೋಟಿ ರೂ.ದಲ್ಲಿ ಪುರಸಭೆಯ ಕಚೇರಿ ಲೇಖನ ಸಾಮಗ್ರಿಗಳು, ವಿದ್ಯುತ್ ಬಿಡಿ ಭಾಗ, ನೀರು ಸರಬರಾಜು, ದಿನಗೂಲಿ ಸಿಬ್ಬಂದಿ ವೇತನ, ಇಂಧನ ಇತರ ಖರ್ಚುಗಳು ಸೇರಿ 19.13 ಕೋಟಿ ರೂ.ಖರ್ಚು ನಿರೀಕ್ಷಿಸಲಾಗಿದೆ. ಅದರಲ್ಲಿ ವಿವಿಧ ಮೂಲಗಳಿಂದ ಒಟ್ಟು 18,41,75,800 ರೂ. ಜಮಾ ಅದರಲ್ಲಿ 18,40,32,568 ರೂ.ಖರ್ಚು ಆಗಿ ಕೊನೆಯಲ್ಲಿ 1,43,232 ರೂ. ಉಳಿತಾಯ ಆಗಲಿದೆ ಎಂದು ಸಭೆಗೆ ವಿವರಿಸಿದರು.

ಅನುದಾನ ಮೀಸಲು: ಕಳೆದ ಸಾಲಿನ ಬಜೆಟ್ ಮಂಡನೆಯಲ್ಲಿ ಪತ್ರಕರ್ತರ ತುರ್ತು ಆರೋಗ್ಯ ಚಿಕಿತ್ಸೆಗೆ ಅನುದಾನ ಮೀಸಲಿಡಲು ಮನವಿ ಸಲ್ಲಿಸಲಾಗಿತ್ತು. ಈ ಬಾರಿಯಾದರೂ ಅವರಿಗೆ ಅನುದಾನ ಮೀಸಲಿಡಲು ಪುರಸಭೆ ಸದಸ್ಯ ತಸ್ಲಿಂ ಮುಲ್ಲಾ ಸಭೆಯ ಗಮನ ಸೆಳೆದರು. ಇದಕ್ಕೆ ಸದಸ್ಯ ಅಜಮೀರ್ ಬೆಳ್ಳಿಕಟ್, ಅಮೀರಬೇಗ್ ಉಸ್ತಾದ ಇತರ ಸದಸ್ಯರು ಧ್ವನಿಗೂಡಿಸುತ್ತಿದ್ದಂತೆ ಮುಖ್ಯಾಧಿಕಾರಿ ಪರಶುರಾಮ ನಾಯಕ ಸ್ಪಂದಿಸಿ ಸಭೆ ಸೂಚನೆ ಮೇರೆಗೆ ಪತ್ರಕರ್ತರ ತುರ್ತು ಆರೋಗ್ಯ ಚಿಕಿತ್ಸೆ ನಿಧಿಗೆ ಅನುದಾನವನ್ನು ಹೊಂದಾಣಿಕೆ ಮಾಡಿ ಮೀಸಲಿಡುವುದಾಗಿ ತಿಳಿಸಿದರು.

ಪುರಸಭೆ ಉಪಾಧ್ಯಕ್ಷೆ ಜಯಶ್ರೀ ಶಂಕ್ರಪ್ಪ ಜೀಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಶಬ್ಬೀರ್ ಪಾಷಾ, ಸದಸ್ಯರಾದ ಅಮೀರ್‌ಬೇಗ್ ಉಸ್ತಾದ್, ತಸ್ಲಿಂಮುಲ್ಲಾ, ಹನುಮಂತ ವಾಲ್ಮೀಕಿ, ಮಹಿಬೂಬ್ ಕಡ್ಡಿಪುಡಿ, ಬಾಬು ಉಪ್ಪಾರ, ಶಿವಗ್ಯಾನಪ್ಪ, ಹನುಮಂತ, ಎಸ್ಕೆ. ಅಜ್ಮೀರ್ ಬೆಳ್ಳಿಕಟ್, ಶಿವಗ್ಯನಪ್ಪ ಬಡಕುರಿ, ಅಮೀನಾಬೇಗಂ ಬಾರಿಗಿಡ, ಲಕ್ಷ್ಮೀ ಅಯ್ಯಪ್ಪಯ್ಯ, ಲತಾ ನಾಗರಾಜ, ಲಕ್ಷ್ಮೀ ಕರಿಯಪ್ಪ, ಮಹಾದೇವಮ್ಮ ಗುತ್ತೆದಾರ, ನಾಮನಿರ್ದೇಶಿತ ಸದಸ್ಯರಾದ ಸಂತೋಷ, ನವನೀತ ಶೇಠ್, ರಫಿ ನಾರೆಲ್ ವಾಲೆ ಸೇರಿ ಇತರರಿದ್ದರು.