ಜಿಲ್ಲೆ

MUDA Scam; ನಾನು ತನಿಖೆ ಎದುರಿಸಲು ಸಿದ್ಧ ಇದ್ದೇನೆ: ಸಿಎಂಸಿದ್ದರಾಮಯ್ಯ

Webdesk - Savina Naik

ಬೆಂಗಳೂರು: ಮುಡಾ (MUDA Scam) ಪ್ರಕರಣದ ಕುರಿತಾಗಿ ನಾನು ಎಲ್ಲಾ ತನಿಖೆ ಎದುರಿಸಲು ಸಿದ್ಧವಾಗಿದ್ದೇನೆ. ಕೋರ್ಟ್​​ ಪ್ರತಿ ಸಿಕ್ಕ ನಂತರ ನಾನು ಈ ಕುರಿತಾಗಿ ಮಾತನಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಮುಡಾದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭಾರಿ ಹಿನ್ನೆಡೆಯಾಗಿದೆ. ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್​​ ಅನ್ನು ಹೈಕೋರ್ಟ್​ ಎತ್ತಿ ಹಿಡಿದ ಬೆನ್ನಲ್ಲೇ ಮುಡಾ ಹಗರಣದ ಕುರಿತು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆ ನಡೆಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರು ಲೋಕಾಯುಕ್ತ ತನಿಖೆಗೆ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶಿಸಿದೆ ಎಂದು ಗೊತ್ತಾಗಿದೆ. ಹೈಕೋರ್ಟ್ ಏಕಸದಸ್ಯ ಪೀಠ ಕೂಡ ತನಿಖೆಗೆ ಆದೇಶಿಸಿದೆ. ಆದೇಶದ ಪೂರ್ಣ ವಿವರ ಓದಿದ ನಂತರ ನಾಳೆ ಪ್ರತಿಕ್ರಿಯೆ ನೀಡುವೆ. ಆದೇಶ ಪೂರ್ಣ ಓದಿದ ಬಳಿಕ ವಕೀಲರ ತಂಡದ ಜತೆಗೆ ಚರ್ಚಿಸಿ ಮುಂದಿನ ಕಾನೂನು ಹೋರಾಟದ ಬಗ್ಗೆ ತೀರ್ಮಾನಿಸುವೆ ಎಂದು ಹೇಳಿದ್ದಾರೆ.

ನಿನ್ನೆಯೇ ಹೇಳಿದ್ದನ್ನು ಇವತ್ತು ಹೇಳುತ್ತೇನೆ. ತನಿಖೆಗೆ ಹೆದರುವುದಿಲ್ಲ, ಕಾನೂನು ಹೋರಾಟ ಮಾಡುತ್ತೇವೆ.ಮುಡಾ ಪ್ರಕರಣದ ಬಗ್ಗೆ ತನಿಖೆಗೆ ನೇಮಿಸಿದ ನ್ಯಾ.ದೇಸಾಯಿ ನೇತೃತ್ವದ ಏಕಸದಸ್ಯ ಆಯೋಗ ತನ್ಮ ಕೆಲಸ ಮುಂದುವರಿಸುತ್ತದೆ ಎಂದಿದ್ದಾರೆ.