ನೆಲಮಂಗಲ: ಕೈಗಾರಿಕೆಗಳಲ್ಲಿ ದೊರೆಯುವ ವೇತನಕ್ಕಿಂತ ಅಧಿಕ ಹಣವನ್ನು ಹೈನುಗಾರಿಕೆಯಲ್ಲಿ ಸಂಪಾದಿಸಬಹುದು ಎಂದು ಬಮುಲ್ ನಿರ್ದೇಶಕ ಜಿ.ಆರ್.ಭಾಸ್ಕರ್ ಅಭಿಪ್ರಾಯಪಟ್ಟರು.
ತಾಲೂಕಿನ ಬೆಟ್ಟಹಳ್ಳಿಪಾಳ್ಯದಲ್ಲಿ ಬುಧವಾರ ಆಯೋಜಿಸಿದ್ದಹಾಲು ಉತ್ಪಾದಕ ಸಹಕಾರ ಸಂಘದ ನೂತನ ಕಟ್ಟಡ ಹಾಗೂ ಶುದ್ಧ ಕುಡಿವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಕರೊನಾ ಹೆಚ್ಚಾಗುತ್ತಿದ್ದು, ಗ್ರಾಮೀಣ ಭಾಗದ ರೈತರು ಆತಂಕ ಪಡುವ ಪರಿಸ್ಥಿತಿ ಎದುರಾಗಿದೆ. ಪ್ರತಿ ಲೀಟರ್ ಹಾಲಿಗೆ 29 ರೂ. ನೀಡುತ್ತಿದ್ದ ಸಂಸ್ಥೆ ಈಗ 24 ರೂ. ನೀಡುತ್ತಿದೆ. 1 ಲೀಟರ್ ನೀರಿನ ಬೆಲೆ 20 ರೂ. ಗಳಾಗಿದೆ. ಆದರೆ ಸಂಸ್ಥೆ 1 ಲೀಟರ್ ಹಾಲಿಗೆ 24 ರೂ. ನೀಡುತ್ತಿರುವುದು ಬೇಸದ ಸಂಗತಿ ಎಂದರು.
ಮುಂದಿನ ದಿನಗಳಲ್ಲಿ ರೈತರ ಹಿತದೃಷ್ಟಿಯಿಂದ ಪ್ರತಿ ಲೀಟರ್ ಹಾಲಿಗೆ ಉತ್ತಮ ಬೆಲೆ ನೀಡಲಾಗುವುದು. ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಬಮುಲ್‌ನಿಂದ ತಾಲೂಕಿನಾದ್ಯಂತ 29ಕ್ಕೂ ಹೆಚ್ಚು ಶುದ್ಧ ಕುಡಿವ ನೀರಿನ ಘಟಕ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ಬಮುಲ್ ಟ್ರಸ್ಟ್ ಉಪವ್ಯವಸ್ಥಾಪಕ ಎ.ಆರ್.ಗೋಪಾಲ್‌ಗೌಡ ಮಾತನಾಡಿ, ಸಂಘಕ್ಕೆ ಗುಣಮಟ್ಟದ ಹಾಲು ಉತ್ಪಾದನೆ ಮಾಡಿದಲ್ಲಿ ಅಧಿಕ ಲಾಭದ ಜತೆಗೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬಹುದು. ಶುದ್ಧ ಕುಡಿಯುವ ನೀರಿನ ಘಟಕವನ್ನು ಸಮರ್ಪಕವಾಗಿ ಬಳಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕಿದೆ ಎಂದರು.
ಬಮುಲ್ ಟ್ರಸ್ಟ್‌ಮುಖ್ಯಕಾರ್ಯನಿರ್ವಣಾಧಿಕಾರಿ ಎ.ಜಿ.ಲೋಕೇಶ್, ಉಪವ್ಯವಸ್ಥಾಪಕ ಪ್ರಸನ್ನಕುಮಾರ್, ವಿಸ್ತಾರಣಾಧಿಕಾರಿ ಎಚ್.ಎಸ್.ಶೃತಿ, ಮೇಲ್ವಿಚಾರಕ ಟಿ.ಎಸ್.ರಮೇಶ್, ಗುರುವನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ಕಾರ್ಯದರ್ಶಿ ರಾಜಗೋಪಾಲ್, ಬೆಟ್ಟಹಳ್ಳಿಪಾಳ್ಯ ಹಾಲು ಉತ್ಪಾದಕ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ಎ.ರಾಮಯ್ಯ, ಉಪಾಧ್ಯಕ್ಷ ಗೋವಿಂದಪ್ಪ, ನಿರ್ದೇಶಕ ಬಿ.ಶಿವಣ್ಣ, ಬಿ.ಜಯಪ್ರಕಾಶ್, ಆರ್.ಮೋಹನ್‌ಕುಮಾರ್, ಎಸ್.ಲೋಕೇಶ್, ರಾಮಾಂಜಿನಪ್ಪ, ಕಮಲಮ್ಮ, ಅರಸಮ್ಮ, ಬಿ.ಜಯಮ್ಮ, ಮುಖ್ಯಕಾರ್ಯನಿರ್ವಾಹಕ ಎಚ್.ಹನುಮೇಶ್ ಮತ್ತಿತರರಿದ್ದರು.