ಪರಪ್ಪನ ಅಗ್ರಹಾರದ ಅನಾಥಶ್ರಮದಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಮಕ್ಕಳಿಗೆ ಹಣ್ಣು ವಿತರಿಸಿದರು. 
ಜಿಲ್ಲೆ

ಮಕ್ಕಳ ಮನಸ್ಸಿನಲ್ಲಿ ಆತ್ಮಸ್ಥೈಯ ತುಂಬಿ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಯಾವ್ಯಾವುದೋ ಕಾರಣಕ್ಕೆ ಮಕ್ಕಳು ಅನಾಥರಾಗುವ ಸಂದರ್ಭಗಳು ಎದುರಾಗುತ್ತವೆ, ಇಂಥ ಮಕ್ಕಳಿಗೆ ಆತ್ಮಸ್ಥೈರ್ಯದೊಂದಿಗೆ ಅವರ ಭವಿಷ್ಯಕ್ಕೆ ಅನುಕೂಲವಾಗುವಂತ ನೆರವು ನೀಡುವುದು ಅವಶ್ಯಕ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಪರಪ್ಪನ ಅಗ್ರಹಾರ ಸಮೀಪದ ಸಂಪಂಗಿ ಲೇಔಟ್‌ನಲ್ಲಿನ ಅನಾಥಶ್ರಮಕ್ಕೆ ಭಾನುವಾರ ಭೇಟಿ ನೀಡಿದ ಸಚಿವರು ಮಕ್ಕಳಿಗೆ ಹಾಲು, ಹಣ್ಣು ವಿತರಿಸಿ ಮಾತನಾಡಿದರು.
ಮಕ್ಕಳು ದೇವರಿಗೆ ಸಮಾನ ಎನ್ನುತ್ತಾರೆ, ಕಲ್ಮಶವಿಲ್ಲದ ಮುಗ್ದ ಮನಸ್ಸಿನ ಮಕ್ಕಳೊಂದಿಗೆ ನಾವು ಕೆಲಕಾಲ ಬೆರೆತು ಮಕ್ಕಳಾಗಿ ನಡೆಯಬೇಕು, ಅನಾಥಮಕ್ಕಳಲ್ಲಿ ಜೀವನದ ಉತ್ಸಾಹ ತುಂಬಬೇಕು. ತಂದೆ-ತಾಯಿಯ ಸ್ಥಾನದಲ್ಲಿ ನಿಂತು ಸಾಧ್ಯವಾದ ನೆರವು ಒದಗಿಸಬೇಕು ಎಂದು ಹೇಳಿದರು.
ಚುನಾವಣೆ ರಿಲಾಕ್ಸ್: ಈ ಹಿಂದಿನಿಂದಲೂ ಅನಾಥಶ್ರಮಗಳಿಗೆ ಭೇಟಿ ನೀಡುವುದು, ಅಲ್ಲಿನವರ ಯೋಗಕ್ಷೇಮ ವಿಚಾರಿಸುವುದು, ಕೆಲಕಾಲ ಅವರೊಂದಿಗೆ ಬೆರೆಯುವುದು ನಡೆದುಕೊಂಡು ಬಂದಿದೆ. ಇದರಿಂದ ಮನಸ್ಸಿಗೆ ಏನೋ ಒಂಥರ ಸಮಾಧಾನ, ಸಂತೃಪ್ತಿ ಸಿಗುತ್ತದೆ. ಕೆಲವರ ಕಷ್ಟ ಸುಖಗಳನ್ನು ವಿಚಾರಿಸಿ ಅವರಿಗೆ ಸಾಂತ್ವನ ಹೇಳುವ, ಆತ್ಮಸ್ಥೈರ್ಯ ತುಂಬುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಎಂಟಿಬಿ ಹೇಳಿದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸತತ ಎರಡು ತಿಂಗಳು ಓಡಾಡಿದ್ದೇನೆ, ಲಿತಾಂಶ ಬಂದು ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್ ಹೆಚ್ಚು ಲೀಡ್‌ನಲ್ಲಿ ಜಯಗಳಿಸಿದ್ದಾರೆ. ಚುನಾವಣಾ ಪೂರ್ವದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ನೀಡಿದ್ದ ಭರವಸೆಗಳನ್ನು ಒಂದೊಂದಾಗಿ ಈಡೇರಿಸಲಿದ್ದಾರೆ ಎಂಬ ಭರವಸೆ ಇದೆ ಎಂದು ಹೇಳಿದರು.