ಸೂಲಿಬೆಲೆ: ಜನರ ತೆರಿಗೆ ಹಣದಿಂದಲೇ ಅಭಿವೃದ್ಧಿ ಕೆಲಸಗಳು ನಡೆಯುತ್ತವೆ. ಜನರ ಹಣದಿಂದ ಜನರಿಗಾಗಿಯೇ ನಡೆಸುವ ಕೆಲಸಗಳು ಜನ ಮೆಚ್ಚುವಂತಿರಬೇಕು ಎಂದು ಪೌರಾಡಳಿತ ಮತ್ತು ಸಣ್ಣಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಹೋಬಳಿಯ ಗಿಡ್ಡಪ್ಪನಹಳ್ಳಿ ಗ್ರಾಪಂನ ಒಳಗೆರೆಪುರ, ಅರಸನಹಳ್ಳಿ, ಅಂಕೋನಹಳ್ಳಿ ಗ್ರಾಮಗಳಲ್ಲಿ ಗುರುವಾರ ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯ ವಿಶೇಷ ಅನುದಾನದ ಹಾಗೂ ಕೆಆರ್ಐಡಿಎಲ್ನ 30 ಲಕ್ಷ ರೂ.ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಯಾವುದೇ ಅಭಿವೃದ್ಧಿ ಕಾಮಗಾರಿಗಳಲ್ಲಿ ಲೋಪ ಎಸಬಾರದು, ಈ ಬಗ್ಗೆ ಅಧಿಕಾರಿಗಳು ಆಗಾಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದರು.
ಕಾಮಗಾರಿಗಳ ಗುತ್ತಿಗೆಪಡೆದವರು ಗುಣಮಟ್ಟ ಕಾಯ್ದುಕೊಳ್ಳಬೇಕು. ಈ ವಿಷಯಲ್ಲಿ ಲೋಪ ಕಂಡುಬಂದರೆ ಅಂಥವರನ್ನು ಕಪು$್ಪಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮೂಲಸೌಕರ್ಯಕ್ಕೆ ಒತ್ತು: ಮತದಾರರು ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವುದು ಮೂಲಸೌಕರ್ಯ ಕಲ್ಪಿಸಲು ಒಬ್ಬ ನಾಯಕ ಬೇಕು ಎಂಬ ದೃಷ್ಟಿಯಿಂದ. ಆದ್ದರಿಂದ ಯಾರೇ ಜನಪ್ರತಿನಿಧಿಯಾಗಲಿ ಆಯಾ ಭಾಗದಲ್ಲಿ ಜನರಿಗೆ ಮೂಲಸೌಕರ್ಯ ಕಲ್ಪಿಸಲು ಸದಾ ಕಾಯೋರ್ನ್ಮುಖನಾಗಿರಬೇಕು. ಜನರ ಆಶೋತ್ತರಗಳಿಗೆ ಸ್ಪಂದಿಸಿದರೆ ಮಾತ್ರ ಮತದಾರರ ಪ್ರತಿ ಮತಕ್ಕೂ ನಿಜವಾದ ತೂಕಬರುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ದೇಗುಲಗಳ ಜೀಣೋರ್ದ್ಧಾರಕ್ಕೆ ನೆರವು: ಇದೇ ವೇಳೆ ನಲ್ಲಾಗನಹಳ್ಳಿಯ ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಸಚಿವರು, ದೇವಾಲಯದ ಜೀಣೋರ್ದ್ಧಾರಕ್ಕೆ ವೈಯಕ್ತಿಕವಾಗಿ 3 ಲ ರೂ. ನೆರವು ನೀಡುವುದಾಗಿ ಘೋಷಿಸಿದರು. ಹಾಗೇಯೇ ಒಳಗೇರಿಪುರ ದೇಗುಲ ದ್ವಾರ ನಿರ್ಮಾಣಕ್ಕೆ ನೆರವು ನೀಡುವುದಾಗಿ ತಿಳಿಸಿ, ದೇಗುಲಗಳ ಜೀಣೋರ್ದ್ಧಾರ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ನನ್ನಿಂದ ಯಾವಾಗಲೂ ಸಹಕಾರವಿರುತ್ತದೆ ಎಂದರು.
ಕುಂದುಕೊರತೆ ಸಭೆ: ಸಚಿವರು ಸಂಚರಿಸಿದ ಗ್ರಾಮಗಳಲ್ಲಿ ಸಾರ್ವಜನಿಕರು ಮೂಲಸೌಕರ್ಯ ಕೊರತೆಗಳ ಬಗ್ಗೆ ಗಮನಕ್ಕೆ ತಂದರು. ಸ್ಥಳದಲ್ಲೇ ಕುಂದುಕೊರತೆ ಸಭೆ ನಡೆಸಿದ ಸಚಿವರು ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದರು. ಸ್ಥಳದಿಂದಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಸಮಸ್ಯೆ ಬಗೆಹರಿಸುವಂತೆ ತಾಕೀತು ಮಾಡಿದರು. ಯಾವುದೇ ಸರ್ಕಾರಿ ಸೌಲಭ್ಯಕ್ಕೆ ಅಲೆದಾಡಿಸಿದರೆ ಅಂಥ ಅಧಿಕಾರಿಗಳ ಬಗ್ಗೆ ಕೂಡಲೇ ನನ್ನ ಗಮನಕ್ಕೆ ತನ್ನಿ ಎಂದು ತಿಳಿಸಿದರು. ರಾಜ್ಯ ಸರ್ಕಾರ ಡಿಸಿ ನಡಿಗೆ ಹಳ್ಳಿಯ ಕಡೆಗೆ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಸರ್ಕಾರಿ ಕಾರ್ಯಕ್ರಮಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಇಂಥ ಸಂದರ್ಭದಲ್ಲೂ ಅಧಿಕಾರಿಗಳು ಸರ್ಕಾರಿ ಸೌಲಭ್ಯಗಳಿಗೆ ಜನರನ್ನು ಅಲೆದಾಡುವಂತೆ ಮಾಡುವುದು ಅವರ ಕರ್ತವ್ಯಲೋಪವನ್ನು ಎತ್ತಿತೋರಿಸುತ್ತದೆ. ಅಂಥ ಅಧಿಕಾರಿಗಳ ಬಗ್ಗೆ ದೂರು ಬಂದರೆ ಶಿಸ್ತುಕ್ರಮ ಜರುಗಿಸಬೇಕು ಎಂದು ಎಚ್ಚರಿಕೆ ನೀಡಿದರು.