ಜಿಲ್ಲೆ

ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಆರ್ಥಿಕ ಸಾಕ್ಷಾರತೆ ಜಾಗೃತಿ ಅವಶ್ಯ: ಪ್ರೊ. ಎಸ್. ಬಿ ಆಕಾಶ್

ಮಂಜುನಾಥ ಕೋಳಿಗುಡ್ಡ

ಬೆಳಗಾವಿ: ದೇಶದ ಅಭಿವೃದ್ಧಿ ಜೊತೆಗೆ ಹಣಕಾಸಿನ ವ್ಯವಹಾರದ ಸಾಕಷ್ಟು ಬದಲಾವಣೆಯಾಗಿದೆ. ಹೀಗಾಗಿ

ಪ್ರತಿಯೊಬ್ಬರಿಗೂ ಆರ್ಥಿಕ ಜಾಗೃತಿ ಅವಶ್ಯವಾಗಿದೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಕಾರಿಯಾಗಲಿದೆ ಎಂದು ಪ್ರೊ. ಎಸ್. ಬಿ ಆಕಾಶ್ ಹೇಳಿದರು.

ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಇವರು ಪಿಎಂ ಉಷಾ ಅಡಿಯಲ್ಲಿ ಡಿ.ಎಂ. ಎಸ್ ಮಂಡಲ್ ಬಾಬುರಾವ್ ಕಾಕತ್ಕರ್ ಕಾಲೇಜಿನಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಸಾಕ್ಷರತಾ ಜಾಗೃತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಪ್ರೊ. ಎಸ್. ಬಿ ಆಕಾಶ್ ವಾಣಿಜ್ಯ ನಿಕಾಯದ ಡೀನರು ಉದ್ಘಾಟಿಸಿದರು

ದೇಶದಲ್ಲಿ ಹಣಕಾಸು ಹಾಗೂ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಅದ್ಭುತವಾದ ಬದಲಾವಣೆ ಕಂಡು ಬರುತ್ತಿದ್ದು, ಬದಲಾವಣೆಗೆ ನಾವು ಹೊಂದಿಕೊಂಡು ಆರ್ಥಿಕ ಸಾಕ್ಷ ರತೆಯನ್ನು ಪಡೆಯಬೇಕೆಂದು. ಹಣಕಾಸಿನ ಸಾಕ್ಷರತೆಯು ಒಬ್ಬ ವ್ಯಕ್ತಿಯ ದೈನಂದಿನ ಜೀವನದಲ್ಲಿ ಮತ್ತು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಹಣಕಾಸಿನ ಹಾಗೂ ಬ್ಯಾಂಕಿಂಗ್‌ ಪರಿಕಲ್ಪನೆಯ ಬಗ್ಗೆ ವಿವರವಾಗಿ ತಿಳಿಸಿ ಕಾಲಕ್ಕೆ ತಕ್ಕಂತೆ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳುವ ಅಗತ್ಯತೆ ಇದೆ ಎಂದು ತಿಳಿಸಿದರು.

ಪಿಎಂ ಉಷಾ ನೋಡಲ್ ಅಧಿಕಾರಿಯಾದ ಡಾ. ನಂದಿನಿ ದೇವರಮನಿ ಮಾತನಾಡಿ, ಪಿಎಂ ಉಷಾ ಮೇರು ಕುರಿತು ಮಾಹಿತಿ ನೀಡಿದರು.

ಪ್ರೊ. ಎ. ಎಸ್‌ ಶಿರಾಳಶೇಟ್ಟಿ ಮಾತನಾಡಿ, ಆರ್ಥಿಕ ಸಾಕ್ಷರತೆ ಮತ್ತು ಹೂಡಿಕೆಯ ಕುರಿತು ವಿಸ್ತಾರವಾದ ಉಪನ್ಯಾಸ ನೀಡಿದರು ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಯೊಗ್ಯವಾದ ಹೂಡಿಕೆ ಬಗ್ಗೆ ಮಾಹಿತಿ ಕೊಟ್ಟರು.

ಒಂದು ದಿನದ ಸಾಕ್ಷರತಾ ಜಾಗೃತಿ ಕಾರ್ಯಕ್ರಮ ದಲ್ಲಿ 300 ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ಸಿಬ್ಬಂದಿಗಳು ಭಾಗವಹಿಸಲು.

ಈ ಸಂದರ್ಭದಲ್ಲಿ ಡಾ‌.ನಂದಿನಿ ದೇವರಮನಿ, ಡಾ. ಎಮ್. ಎಮ್. ಮುನಶಿ, ಪ್ರೊ. ಎಮ್. ವಿ. ಶಿಂದೆ, ಪ್ರೊ. ಆನಂದ ಪಾಟೀಲ, ಡಾ. ಎಮ್. ಎಸ್. ಪಾಟೀಲ, ಸಂಶೋಧನಾ ವಿದ್ಯಾರ್ಥಿ ಅಶ್ವತ. ಆರ್‌ ಸ್ವಾಗತಿಸಿದರು. ವಿದ್ಯಾರ್ಥಿನಿ ಚಿನ್ನಾ ಬಡಿಗೇರ ನಿರೂಪಿಸಿದರು. ಷಿತೀಜಾ ಕಣಗಲಿ ವಂದಿಸಿದರು.