ಬೈಲಹೊಂಗಲ: ಸ್ಥಳೀಯ ಬೆಳಗಾವಿ ರಸ್ತೆಯ ಶಾಲಾ-ಕಾಲೇಜು ವಲಯದಲ್ಲಿರುವ ಎಂಎಸ್‌ಐಎಲ್ ಮಳಿಗೆ ಸ್ಥಳಾಂತರಗೊಳಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿ ಕಿತ್ತೂರು ಕರ್ನಾಟಕ ಸೇನೆ ಕಾರ್ಯಕರ್ತೆಯರು ಎರಡನೇ ದಿನ ಗುರುವಾರವೂ ಪ್ರತಿಭಟನೆ ನಡೆಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಶಿವಾನಂದ ಕೋಲಕಾರ ಮಾತನಾಡಿ, ಮುರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ನವೋದಯ ವಸತಿ ಶಾಲೆ ಸನಿಹದಲ್ಲೇ ಎಂಎಸ್‌ಐಎಲ್ ಮಳಿಗೆ ಇರುವುದರಿಂದ ತೊಂದರೆಯಾಗುತ್ತಿದೆ. ಹೀಗಾಗಿ ಕೂಡಲೇ ಎಂಎಸ್‌ಐಎಲ್ ಮಳಿಗೆ ಸ್ಥಳಾಂತರಗೊಳಿಸಬೇಕೆಂದು ಆಗ್ರಹಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಎಂಎಸ್‌ಐಎಲ್ ಜಿಲ್ಲಾ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಮೂರ್ತಿ, ಪ್ರತಿಭಟನಾ ನಿರತರ ಸಮಸ್ಯೆ ಆಲಿಸಿ 15 ದಿನಗಳೊಳಗೆ ಎಂಎಸ್‌ಐಎಲ್ ಮಳಿಗೆ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.
ರಾಜ್ಯ ಮಹಿಳಾ ಘಟಕ ಉಪಾಧ್ಯಕ್ಷೆ ರತ್ನಾ ಗೋಧಿ, ಚಂದ್ರಿಕಾ ಕಳಂಕರ, ಅಭಿಷೇಕ ಕಲಾಲ, ಮಲ್ಲಿಕಾರ್ಜುನ ಬಾಜಿ, ಆನಂದ ಪಾಟೀಲ, ಪಿಂಟು ಕುದುರಿ, ಮಲ್ಲವ್ವ ಯರಗಟ್ಟಿ, ಶಾಂತಮ್ಮ ಕುರಿ, ನೀಲವ್ವ ಖನಗೌಡರ, ಪ್ರೇಮವ್ವ ನಂದೆನ್ನವರ, ಪ್ರೇಮಾ ಚಚಡಿ, ಲಲಿತಾ ಹಂಪಣ್ಣವರ, ಮಂಜುಳಾ ತಳವಾರ ಇತರರಿದ್ದರು.