ಜಿಲ್ಲೆ

ಎಂಎಸ್‌ಪಿಎಲ್ ಸಿಇಒ ಕೆ.ಮಧುಸೂದನ್‌ಗೆ ಶ್ರೇಷ್ಠ ಪ್ರಶಸ್ತಿ

ಮಂಜುನಾಥ

ಹೊಸಪೇಟೆ: ಕೋಲ್ಕತ್ತಾ ಮೈನಿಂಗ್ ಜಿಯೋಲಾಜಿಕಲ್ ಮತ್ತು ಮೆಟಲರ್ಜಿಕಲ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿAದ ಇಲ್ಲಿನ ಎಂಎಸ್‌ಪಿಎಲ್ ಸಿಇಒ ಕೆ.ಮಧುಸೂದನ್‌ಗೆ 2023-24ನೇ ಸಾಲಿನ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಿದೆ.

ಗಣಿಗಾರಿಕೆ ಉದ್ಯಮದಲ್ಲಿ ಅನುಭವದೊಂದಿಗೆ, ಸುರಕ್ಷಿತ ರೀತಿಯಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ವಿವಿಧ ಕ್ರಮಗಳನ್ನು ತೆಗೆದುಕೊಂಡಿದಾರೆ, ಎಲ್ಲಾ ಹಕ್ಕುಗಳ ತಡೆ ರಹಿತ ವರ್ಗಾವಣೆ ಮತ್ತು ಹರಾಜು ಗಣಿಗಳಿಗೆ ಅನುಮೋದನೆಗಳನ್ನು, ತೆಗೆದುಕೊಂಡಿದಾರೆ. ಸಮರ್ಥ ನಾಯಕತ್ವದಲ್ಲಿ, ಪ್ರಥಮ ಚಿಕಿತ್ಸಾ ತರಬೇತಿ, ಇಳಿಜಾರಿನ ಸ್ಥಿರತೆಯ ಪ್ರಾಮುಖ್ಯತೆ, ಸ್ಫೋಟದ ಫಲಿತಾಂಶಗಳ ವರ್ಧನೆ, ಗಣಿ ಕಾರ್ಯಾಚರಣೆಯ ಡಿಜಿಟಲೀಕರಣ, ಸಂಪನ್ಮೂಲ ಅಂದಾಜು, ಪ್ರಥಮ ಚಿಕಿತ್ಸಾ ತರಬೇತಿಯಲ್ಲಿ ಗಣಿಗಾರಿಕೆ ಭ್ರಾತೃತ್ವದ ಕೌಶಲ್ಯ ಅಭಿವೃದ್ಧಿಯನ್ನು ಸುರಕ್ಷಿತ ಮತ್ತು ಸುಸ್ಥಿರ ಗಣಿಗಾರಿಕೆಗಾಗಿ ಸ್ಮಾರ್ಟ್ ಗಣಿಗಾರಿಕೆ ವ್ಯವಸ್ಥೆ ಹೆಚ್ಚಿಸಲು ಎಂಇಎಎಲ್ ವಿವಿಧ ತರಬೇತಿ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಗಳನ್ನು ಕ್ಯೆಗೊಂಡಿದಾರೆ. ಸಿಇಒ ಕೆ.ಮಧುಸೂದನ್ ಅವರು ಕಲ್ಲಿದ್ದಲು ಗಣಿಗಾರಿಕೆಯೇತರ ಕ್ಷೇತ್ರದಲ್ಲಿ ಅವರ ಅತ್ಯುತ್ತಮ ಕೊಡುಗೆಗಾಗಿ ಪ್ರತಿಷ್ಠಿತ ಎಂಜಿಎAಎಲ್ ಪ್ರಶಸ್ತಿಯನ್ನು ನೀಡಲಾಗಿದೆ. ಎಂಜಿಎAಐ ಅಧ್ಯಕ್ಷ ಪ್ರಶಸ್ತಿಯನ್ನು ಪ್ರದಾನ ಮಾಡಿದರು.