ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಹಿರಿಯರ ವೇದಿಕೆ ಮೃತ್ಯುಂಜಯ ಗೆಳೆಯರ ಬಳಗದ 14ನೇ ವಾಷಿರ್ಕೋತ್ಸವ ಇತ್ತೀಚೆಗೆ ಜರುಗಿತು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಡಾ. ಎಚ್.ವಿ. ಬೆಳಗಲಿ ಮಾತನಾಡಿ, ಆಧುನಿಕ ಯುಗದಲ್ಲಿ ಗುರು ಹಿರಿಯರು ಸಾಂಸತಿಕ ರಾಯಭಾರಿಗಳು. ಅವರ ಅನುಭವದ ನುಡಿಗಳು ಸಮಾಜಕ್ಕೆ ದಾರಿದೀಪವಾಗಿವೆ. ಇಂತಹ ಸಂಘಟನೆಗಳು ನಿರಂತರ ಕಾರ್ಯದಿಂದಲೇ ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಲ್. ಪಾಟೀಲ ಸಂಘಟನೆಯ ಮಹತ್ವ ತಿಳಿಸಿದರು. ಎಸಿಪಿ ಶಿವಪ್ರಕಾಶ ನಾಯಕ ಅವರು ಹಿರಿಯರ ಕಾನೂನುಗಳ ಬಗ್ಗೆ ತಿಳಿಸಿಕೊಟ್ಟರು.
ಸಿಪಿಐ ಡಿ.ಕೆ. ಪಾಟೀಲ, ಪಿಎಸ್ಐ ಶ್ರೀಮಂತ ಪಾಟೀಲ, ಎಸ್.ಎಂ. ಸಜ್ಜನರ, ಆರ್.ವಿ. ಪಾಟೀಲ, ಶೇಖಣ್ಣ ಬಾಸೂರ. ಕೆ.ಎಸ್. ಹುದ್ದಾರ, ಎನ್.ಆರ್. ಹನ್ನಿ, ಕೆ.ಎನ್. ಅಷ್ಟಗಿಮಠ, ಮೃತ್ಯುಂಜಯ ಗೆಳೆಯರ ಬಳಗದ ಪದಾಧಿಕಾರಿಗಳು, ಹಿರಿಯರು ಪಾಲ್ಗೊಂಡಿದ್ದರು.
ಡಾ. ಮಹೇಶ ಹೊರಕೇರಿ ಪರಿಚಯಿಸಿದರು. ಎಸ್.ಎ. ಪಾಟೀಲ ನಿರೂಪಿಸಿದರು. ಆರ್.ಎಲ್. ರಾಯಬಾಗಿ ಪ್ರಾಥಿರ್ಸಿದರು, ವಿ.ವಿ. ಕುರ್ತಕೋಟಿ ವಂದಿಸಿದರು.