ಜಿಲ್ಲೆ

ಇಲ್ಲಿದೆ 'ಮಿಸೆಸ್​ ಸೌತ್ ಇಂಡಿಯಾ' ಆಗುವ ಅವಕಾಶ; ವಿಜೇತರಿಗೆ ಅಂತಾರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಗೆ ಪ್ರವೇಶ

ಬೆಂಗಳೂರು: ಯುವತಿಯರಿಗೆ ಹಾಗೂ ಮಹಿಳೆಯರಿಗೆ ಮಿಸೆಸ್​ ಸೌತ್ ಇಂಡಿಯಾ ಆಗುವಂಥ ಅವಕಾಶವೊಂದು ತೆರೆದುಕೊಂಡಿದೆ. ಹೌದು.. 2022ರ ಮಿಸೆಸ್ ಸೌತ್ ಇಂಡಿಯಾ ಐ ಆಮ್ ಪವರ್‌ಫುಲ್ ಸ್ಪರ್ಧೆಯ ಆಡಿಷನ್‌ಗೆ ವೇದಿಕೆ ಸಜ್ಜಾಗಿದೆ.

ವಿಶೇಷವೆಂದರೆ ಈ ಆಡಿಷನ್ ರಾಜಧಾನಿ ಬೆಂಗಳೂರಿನಲ್ಲೇ ನಡೆಯಲಿದೆ. ಫೆ. 18ರಂದು ಬೆಳಗ್ಗೆ 10ರಿಂದ ವೈಟ್​ಫೀಲ್ಡ್​ನಲ್ಲಿರುವ ಮ್ಯಾರಿಯಟ್ ಹೋಟೆಲ್​ನಲ್ಲಿ ಈ ಆಡಿಷನ್ ನಡೆಯಲಿದೆ.

'ಮಿಸೆಸ್ ಸೌತ್ ಇಂಡಿಯಾ ಐ ಆಮ್ ಪವರ್‌ಫುಲ್-2022' ಎಂಬ ಈ ಸೌಂದರ್ಯ ಸ್ಪರ್ಧೆಯನ್ನು ನಂದಿನಿ ನಾಗರಾಜ್​ ಎಂಬವರು ಆಯೋಜಿಸಿದ್ದು, ಇದರಲ್ಲಿ ಯುವತಿಯರು ಮಾತ್ರವಲ್ಲದೆ ಮಹಿಳೆಯರಿಗೂ ಅವಕಾಶವಿದೆ. ಅಂದರೆ 18ರಿಂದ 55 ವರ್ಷದ ವರೆಗಿನವರು ಇದರಲ್ಲಿ ಭಾಗವಹಿಸಬಹುದು. ಅವರಲ್ಲಿ ಐವತ್ತು ಮಂದಿಯನ್ನು ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು.

ಆ ಐವತ್ತು ಮಂದಿಯಲ್ಲಿ ವಿಜೇತರಾದವರು ಮಿಸೆಸ್ ಸೌತ್ ಇಂಡಿಯಾ ಐ ಆಮ್ ಪವರ್‌ಫುಲ್ ಮುಖ್ಯ ಸ್ಪರ್ಧೆಗೆ ಪ್ರವೇಶ ಪಡೆಯಲಿದ್ದಾರೆ. ಅಲ್ಲಿಯೂ ವಿಜೇತರಾದವರು ಸಿಂಗಾಪುರದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಆಸಕ್ತರು ಹೆಚ್ಚಿನ ಮಾಹಿತಿಗೆ 9901755163ಗೆ ಕರೆ ಮಾಡಬಹುದು.