ಜಿಲ್ಲೆ

ಎಂಆರ್‌ಪಿಎಲ್‌ಗೆ ಡನ್ ಅಂಡ್ ಬ್ರಾಡ್‌ಸ್ಟ್ರೀಟ್ ಪಿಎಸ್‌ಯು ಅವಾರ್ಡ್

ಮಂಗಳೂರು: ರಿಫೈನರಿ ಅಂಡ್ ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್(ಎಂಆರ್‌ಪಿಎಲ್)ಡನ್ ಅಂಡ್ ಬ್ರಾಡ್‌ಸ್ಟ್ರೀಟ್ ಪಿಎಸ್‌ಯು ಅವಾರ್ಡ್‌ನ್ನು ಪಡೆದುಕೊಂಡಿದೆ.

ಡನ್ ಅಂಡ್ ಬ್ರಾಡ್‌ಸ್ಟ್ರೀಟ್ ವಿಶ್ವದ ಅತ್ಯುನ್ನತ ಬಿ2ಬಿ ಎನಾಲಿಟಿಕ್ಸ್ ಮತ್ತು ಬಿಸಿನೆಸ್ ಇಂಟೆಲಿಜೆನ್ಸ್ ಪ್ರೊವೈಡರ್ ಆಗಿದ್ದು, ನವದೆಹಲಿಯಲ್ಲಿ ನಡೆದ 15ನೇ ಆವೃತ್ತಿಯ ಪಿಎಸ್‌ಯುಎಸ್ ಅಂಡ್ ಗವರ್ನಮೆಂಟ್ ಸಮಿತ್‌ನಲ್ಲಿ ಎಂಆರ್‌ಪಿಎಲ್‌ಗೆ ಅತ್ಯುತ್ತಮ ಮಿನಿರತ್ನ ಅವಾರ್ಡ್‌ಗೆ ನೀಡಿತ್ತು.

ಎಂಆರ್‌ಪಿಎಲ್‌ನ ಗಣನೀಯ ಸಾಧನೆಗೆ ಈ ಪುರಸ್ಕಾರ ಸಂದಿದೆ. ಎಂಆರ್‌ಪಿಎಲ್ ಮ್ಯಾನೇಜಿಂಗ್ ಡೈರೆಕ್ಟರ್ ಸಂಜಯ್ ವರ್ಮಾ ಹಾಗೂ ಜಿಜಿಎಂ ಶ್ರೀಕೃಷ್ಣ ಹೆಗಡೆ ಅವರು ಪ್ರಶಸ್ತಿ ಸ್ವೀಕರಿಸಿದರು.