ಕೇಂದ್ರ ಇಂಧನ ಖಾತೆಯ ಸಚಿವ ಆರ್.ಕೆ.ಸಿಂಗ್ ಅವರಿಂದ ಎಂಆರ್‌ಪಿಎಲ್‌ನ ಜಿಜಿಎಂಗಳಾದ ಚಂದರ್‌ಮಣಿ, ಆನಂದ್ ಹಾರಾಡಿ ಅಶೋಕ್ ಮತ್ತು ಹಿರಿಯ ವ್ಯವಸ್ಥಾಪಕಿ ಸಿ.ಶರಣ್ಯ ಪ್ರಶಸ್ತಿ ಸ್ವೀಕರಿಸಿದರು. 
ಜಿಲ್ಲೆ

ಎಂಆರ್‌ಪಿಎಲ್‌ಗೆ ಟಾಪ್ ಪರ್ಫಾರ್ಮರ್ ಪ್ರಶಸ್ತಿ

Shravan Kumar Nala

ಮಂಗಳೂರು: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್(ಎಂಆರ್‌ಪಿಎಲ್)ಗೆ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿಯು ಪೆಟ್ರೋಲಿಯಂ ರಿಫೈನರಿ ವಲಯದಲ್ಲಿ ಶಕ್ತಿ ಸಂರಕ್ಷಣಾ ಕ್ರಮಗಳಿಗಾಗಿ ಟಾಪ್ ಪರ್ಫಾರ್ಮರ್ ಪ್ರಶಸ್ತಿ ನೀಡಿದೆ.

ನವದೆಹಲಿಯಲ್ಲಿ ಜರಗಿದ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿಯ ಸಂಸ್ಥಾಪನಾ ದಿನಾಚರಣೆಯಲ್ಲಿ ಕೇಂದ್ರ ಇಂಧನ ಹಾಗೂ ನವೀಕರಿಸಬಹುದಾದ ಇಂಧನ ಖಾತೆಯ ಸಚಿವ ಆರ್.ಕೆ.ಸಿಂಗ್ ಪ್ರಶಸ್ತಿ ವಿತರಿಸಿದರು. ಎಂಆರ್‌ಪಿಎಲ್‌ನ ಜಿಜಿಎಂಗಳಾದ ಚಂದರ್‌ಮಣಿ, ಆನಂದ್ ಹಾರಾಡಿ ಅಶೋಕ್ ಮತ್ತು ಹಿರಿಯ ವ್ಯವಸ್ಥಾಪಕಿ ಸಿ.ಶರಣ್ಯ ಪ್ರಶಸ್ತಿ ಸ್ವೀಕರಿಸಿದರು.

ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿಯಿಂದ ಜಾರಿಗೊಳಿಸಲಾದ ನಿರ್ವಹಿಸಿ, ಸಾಧಿಸಿ ಮತ್ತು ವ್ಯಾಪಾರ ಮಾಡಿ ಈ ಮಿಷನ್ ಅಡಿಯಲ್ಲಿ ಶಕ್ತಿ ಸಂರಕ್ಷಣಾ ಕ್ರಮ ಪ್ರಮುಖ ಕಾರ್ಯಕ್ರಮವಾಗಿದೆ ಕೇಂದ್ರ ಸರ್ಕಾರದ ವಿದ್ಯುತ್ ಸಚಿವಾಲಯದ ಅಡಿಯಲ್ಲಿ ದಕ್ಷತೆಗಾಗಿ ಈ ಪ್ರಶಸ್ತಿ ಸಂದಿದೆ ಎಂದು ಪ್ರಕಟಣೆ ತಿಳಿಸಿದೆ.