ಮಂಗಳೂರು: ರಾಷ್ಟ್ರೀಯ ವಿಪತ್ತು ಪ್ರಾಧಿಕಾರದ ವತಿಯಿಂದ ದ.ಕ ಜಿಲ್ಲಾಡಳಿತದ ನೇತೃತ್ವದಲ್ಲಿ ಶುಕ್ರವಾರ ಎಂಆರ್‌ಪಿಎಲ್‌ನಲ್ಲಿ ರಾಸಾಯನಿಕ ಅವಘಡ ನಿರ್ವಹಣೆ ಕುರಿತಂತೆ ಕಲ್ಪಿತ ಕಾರ್ಯಾಚರಣೆ ನಡೆಯಿತು. ಬೆಳಗ್ಗೆ 9.40ಕ್ಕೆ ಆರಂಭವಾದ ಕಾರ್ಯಾಚರಣೆ ಮಧ್ಯಾಹ್ನ 12 ಗಂಟೆ ವರೆಗೆ ನಡೆಯಿತು. ಅನಿಲ ಸೋರಿಕೆಯಿಂದ 8 ಮಂದಿ ಸಾವು, 20 ಮಂದಿ ಗಂಭೀರ ಗಾಯ, 10 ಮಂದಿಗೆ ಗಾಯ, ಸ್ಥಳೀಯ ಗ್ರಾಮಸ್ಥರ ಸ್ಥಳಾಂತರ ಮೊದಲಾದವುಗಳನ್ನು ಕಾರ್ಯಾಚರಣೆ ತೋರಿಸಲಾಯಿತು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೀನಿಯರ್ ಕನ್ಸಲ್ಟೆಂಟ್ ಬ್ರಿಗೇಡಿಯರ್ ಬಿರೇಂದರ್ ಠಾಕೂರ್, ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರ ಕಮಿಷನರ್ ಮನೋಜ್ ರಾಜನ್, ಬಾಯ್ಲರ್ ಮತ್ತು ಫ್ಯಾಕ್ಟರಿ ಇಲಾಖೆ ನಿರ್ದೇಶಕ ಶ್ರೀನಿವಾಸ್, ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶ್ ಅಪರ ಜಿಲ್ಲಾಧಿಕಾರಿ ಎಚ್.ಕೃಷ್ಣಮೂರ್ತಿ ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.