ಮಂಗಳೂರು: ಹಸಿರು ಇಂಧನ ಉಪಕ್ರಮಗಳನ್ನು ಉತ್ತೇಜಿಸುವ ಕಾರ್ಯಕ್ರಮದ ಭಾಗವಾಗಿ ಮಂಗಳೂರು ರಿಫೈನರಿ ಆಂಡ್ ಪೆಟ್ರೋ ಕೆಮಿಕಲ್ಸ್ ಲಿ. (ಎಂಆರ್‌ಪಿಎಲ್) ಇತ್ತೀಚೆಗೆ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ. (ಬಿಪಿಸಿಎಲ್) ನೊಂದಿಗೆ ದೀರ್ಘಾವಧಿಯ ಮರು ಅನಿಲೀಕೃತ ನೈಸರ್ಗಿಕ ಅನಿಲ (ಆರ್‌ಎಲ್‌ಎನ್‌ಜಿ) ಒಪ್ಪಂದಕ್ಕೆ ಸಹಿ ಹಾಕಿದೆ.
ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಎಂಆರ್‌ಪಿಎಲ್ ಗ್ರೂಪ್ ಜನರಲ್ ಮ್ಯಾನೇಜರ್- ಟಿಎಸ್ ಸತ್ಯನಾರಾಯಣ ಎಚ್.ಸಿ ಮತ್ತು ಬಿಪಿಸಿಎಲ್ ಚೀಫ್ ಜನರಲ್ ಮ್ಯಾನೇಜರ್ (ಸೇಲ್ಸ್ ಮತ್ತು ಲಾಜಿಸ್ಟಿಕ್ಸ್) ಸಂತೋಷ್ ಸೊಂತಕ್ಕೆ ಅವರು ಐದು ವರ್ಷ ಅವಧಿಯ ಒಪ್ಪಂದಕ್ಕೆ ಸಹಿ ಹಾಕಿದರು.
ಕೊಚ್ಚಿನ್ ಟರ್ಮಿನಲ್‌ನಿಂದ ದ್ರವ ರೂಪದಲ್ಲಿ ಎಂಆರ್‌ಪಿಎಲ್ ಸಂಸ್ಕರಣಾಗಾರಕ್ಕೆ ಪೂರೈಕೆಯಾಗುವ ಇಂಧನವನ್ನು ಅನಿಲವಾಗಿ ಪರಿವರ್ತಿಸುವ ಯೋಜನೆ ಇದಾಗಿದೆ.
ಎಂಆರ್‌ಪಿಎಲ್ ಹಣಕಾಸು ನಿರ್ದೇಶಕ ವಿವೇಕ್ ಟೊಂಗಾಂವ್ಕರ್, ಇಡಿ ಪ್ರಾಜೆಕ್ಟ್‌ಸ್ ಬಿಎಚ್‌ವಿ ಪ್ರಸಾದ್, ಇಡಿ ರಿಫೈನರಿ ಶ್ಯಾಂ ಪ್ರಸಾದ್ ಮತ್ತು ಬಿಪಿಸಿಎಲ್ ನ ಇಡಿ- ಗ್ಯಾಸ್ ಅನಿಲ್ ಕುಮಾರ್, ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.