ಜಿಲ್ಲೆ

ಎಂಆರ್‌ಪಿಎಲ್ 17.12 ಎಂಎಂಟಿ ಕಚ್ಚಾ ತೈಲ ಸಂಸ್ಕರಣೆ

ಮಂಗಳೂರು: ಮಂಗಳೂರು ರಿೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ನ 35 ನೇ ವಾರ್ಷಿಕ ಮಹಾ ಸಭೆ ಶುಕ್ರವಾರ ನಡೆಯಿತು.


ಎಂಆರ್‌ಪಿಎಲ್ ಅಧ್ಯಕ್ಷ ಅರುಣ್ ಕುಮಾರ್ ಸಿಂಗ್ ಅವರು ಕಂಪನಿಯ ಷೇರುದಾರರನ್ನು ಉದ್ದೇಶಿಸಿ ಮಾತನಾಡಿ, 2022-23 ರ ಆರ್ಥಿಕ ವರ್ಷದಲ್ಲಿ 17.12 ಮಿಲಿಯನ್ ಮೆಟ್ರಿಕ್ ಟನ್(ಎಂಎಂಟಿ) ದಾಖಲೆಯ ಕಚ್ಚಾ ತೈಲ ಸಂಸ್ಕರಣೆಯ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಇದು ಅತಿದೊಡ್ಡ ಪಿಎಸ್‌ಯು ಸಂಸ್ಕರಣಾಗಾರವಾಗಿದ್ದು, ಎಲ್‌ಪಿಜಿ, ಎಂಎಸ್, ಎಟಿಎ್ ಮತ್ತು ಎಚ್‌ಎಸ್‌ಡಿಯಂತಹ ಪ್ರಮುಖ ಉತ್ಪನ್ನಗಳ ದಾಖಲೆಯ ಸಂಸ್ಕರಣೆ ಮೂಲಕ ಶೇ.114 ರಷ್ಟು ಅತ್ಯಧಿಕ ಸಾಮರ್ಥ್ಯವನ್ನು ಬಳಸಿಕೊಳ್ಳಲಾಗಿದೆ ಎಂದರು.


ಪಾಲಿಪ್ರೊಪಿಲೀನ್ ವ್ಯವಹಾರದಲ್ಲಿ ಬಲವಾದ ಪ್ಯಾನ್-ಇಂಡಿಯಾ ಉಪಸ್ಥಿತಿಯೊಂದಿಗೆ ಕಂಪನಿಯ ಮಾರ್ಕೆಟಿಂಗ್ ಕಾರ್ಯಾಚರಣೆಗಳು ವಿಸ್ತರಿಸಲಾಗುತ್ತಿದೆ. ಚಿಲ್ಲರೆ ಜಾಲ ವಿಸ್ತರಣೆಯ ಮೂಲಕ ಗಣನೀಯ ಇಂಧನ ಮಾರಾಟದ ಮೈಲಿಗಲ್ಲು ಸಾಧಿಸಲು ಯೋಜನೆ ರೂಪಿಸಿದೆ. ಹೆಚ್ಚುವರಿಯಾಗಿ, ಕಂಪನಿಯು ಜೈವಿಕ ಇಂಧನ ಉತ್ಪಾದನೆ ಮತ್ತು ಹಸಿರು ಹೈಡ್ರೋಜನ್ ಉತ್ಪಾದನೆಯ ಯೋಜನೆಗಳನ್ನು ಹೊಂದಿದೆ ಎಂದರು.


ವ್ಯವಸ್ಥಾಪಕ ನಿರ್ದೇಶಕ ಸಂಜಯ್ ವರ್ಮಾ ಮಾತನಾಡಿ, ಎಂಆರ್‌ಪಿಎಲ್ ನಾವೀನ್ಯತೆಯನ್ನು ಪ್ರದರ್ಶಿಸುವ ವಿಚಾರದಲ್ಲಿ ಕಂಪನಿಯು 19 ಪೇಟೆಂಟ್‌ಗಳಿಗೆ ಅರ್ಜಿ ಸಲ್ಲಿಸಿದೆ ಮತ್ತು ಈಗಾಗಲೇ ನಾಲ್ಕು ಪೇಟೆಂಟ್‌ಗಳನ್ನು ಪಡೆದುಕೊಂಡಿದೆ. ಅವುಗಳಲ್ಲಿ ಎರಡು ಲಾಭದಾಯಕ ವ್ಯಾಪಾರ ಬೆಳವಣಿಗೆಯ ಅವಕಾಶಗಳಿಗೆ ಗಮನಾರ್ಹ ಸಾಮರ್ಥ್ಯವನ್ನು ಹೊಂದಿವೆ ಎಂದರು. ಈ ಸಂದರ್ಭ ಹಣಕಾಸು ವಿಭಾಗದ ನಿರ್ದೇಶಕ ವಿವೇಕ್ ಟೊಂಗಾಂವ್ಕರ್, ಮಂಡಳಿಯ ಇತರ ನಿರ್ದೇಶಕರು ಮತ್ತು ಎಂಆರ್‌ಪಿಎಲ್‌ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.