ಲಿಂಗಸುಗೂರು: ಪಟ್ಟಣದ ಗುರುಭವನದಲ್ಲಿ ಹೂ ಅಲ್ ಶಿಫಾಹ ವನೌಷಧಿಕ ಆಯುರ್ವೇದ ವೈದ್ಯ ಪರಿಷತ್ ಹಾಗೂ ಜನಕಲ್ಯಾಣ ಟ್ರಸ್ಟ್‌ನಿಂದ ಜೂ.8 ರಂದು ಬೆಳಗ್ಗೆ 10:15 ಗಂಟೆಗೆ ಮೃಗಶಿರ ಉಚಿತ ಮಾತ್ರೆ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಜಲಾಲುದ್ದೀನ್ ಅಕ್ಬರ್ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸ್ತಮಾ, ಅಲರ್ಜಿ, ದಮ್ಮು, ಕೆಮ್ಮು, ಉಬ್ಬಸ ಇತರೆ ಶೀತಲ ರೋಗಗಳಿಗೆ ಉಚಿತ ತಪಾಸಣೆ ನಡೆಸಲಾಗುವುದು. ಪ್ರತಿವರ್ಷದಂತೆ ಮೃಗಶಿರ ಉಚಿತ ಮಾತ್ರೆ ವಿತರಿಸಲಾಗುವುದು.
ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಪ್ರಮುಖರಾದ ಮಾರುತಿ ಗೋಸ್ಲೆ, ಬಸವರಾಜ, ರಾಜು ಬಂಡಿ, ರಮೇಶ, ಕ್ಷೀರಲಿಂಗ ಇದ್ದರು.