ಜಿಲ್ಲೆ

ಎಂಆರ್​ಐ, ಸಿ.ಟಿ. ಸ್ಕ್ಯಾನ್​ಗೆ ಪೀಕಲಾಟ

ಕೋಲಾರ ಡೆಸ್ಕ್

ಕಿರುವಾರ ಎಸ್​.ಸುದರ್ಶನ್​ ಕೋಲಾರ

ನಗರದ ಜಿಲ್ಲಾ ಎಸ್​ಎನ್​ಆರ್​ ಆಸ್ಪತ್ರೆಯಲ್ಲಿ ಸಿ.ಟಿ. ಹಾಗೂ ಎಂಆರ್​ಐ ಸ್ಕಾ$ನಿಂಗ್​ ಮಾಡಿಸಲು ಸರ್ಕಾರ ರೂಪಿಸಿರುವ ಕಠಿಣ ನಿಯಮಗಳಿಂದ ರೋಗಿಗಳು ಪರದಾಡುವಂತಾಗಿದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರೋಗ ಪತ್ತೆ ಉಚಿತ ಸೇವೆಗಳ ಕಾರ್ಯಕ್ರಮದಡಿ ಸಿ.ಟಿ. ಮತ್ತು ಎಂಆರ್​ಐ ಸ್ಕಾ$ನ್​ ಸೇವೆಗಳನ್ನು ಸರ್ಕಾರಿ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ರಾಜ್ಯದ 15 ಜಿಲ್ಲಾ ಆಸ್ಪತ್ರೆಗಳಲ್ಲಿ ಸಿ.ಟಿ. ಹಾಗೂ 5 ಜಿಲ್ಲಾ ಆಸ್ಪತ್ರೆಗಳಲ್ಲಿ ಎಂಆರ್​ಐ ಯಂತ್ರಗಳನ್ನು 2017&18ರಲ್ಲಿ ಅಳವಡಿಸಲಾಗಿದೆ. ಆರಂಭದಲ್ಲಿ ಬಿಪಿಎಲ್​, ಎಪಿಎಲ್​ ಪಡಿತರ ಚೀಟಿ ಇದ್ದರೂ ನಿರ್ವಹಣೆ ವೆಚ್ಚ ಎಂದು ಶುಲ್ಕ ವಸೂಲಿ ಮಾಡಲಾಗುತ್ತಿತ್ತು.

ಆನಂತರ ಸಾಧಕ&ಬಾಧಕ ಚರ್ಚಿಸಿ ಎಪಿಎಲ್​, ಬಿಪಿಎಲ್​ ಎಂಬ ಭೇದವಿಲ್ಲದೆ ಉಚಿತ ಮಾಡಲಾಯಿತು. ಚಿಕಿತ್ಸೆಗಾಗಿ ದಾಖಲಾಗುವ ಮುಂಚೆ ಆಧಾರ್​ ಲಿಂಕ್​ ಮಾಡಿಸಬೇಕು. ಅವಶ್ಯ ಇದ್ದಲ್ಲಿ ಮಾತ್ರ ವೈದ್ಯರು ಎಂಆರ್​ಐ, ಸಿ.ಟಿ. ಸ್ಕಾ$ನ್​ ಮಾಡಿಸಲು ಶಿಾರಸು ಮಾಡಿದರೆ ಪರೀೆ ಮಾಡಲಾಗುತ್ತಿತ್ತು.

ಸ್ಕಾ$ನ್​ ಸೇವೆಯನ್ನು ಉಚಿತ ಪಡಿಸಿದ ಮೇಲೆ ಜಿಲ್ಲೆಯಲ್ಲದೆ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಂದಲ್ಲೂ ಕೋಲಾರಕ್ಕೆ ರೋಗಿಗಳು ಆಗಮಿಸುತ್ತಿದ್ದಾರೆ. ಇದರಿಂದಾಗಿ ಎಂಆರ್​ಐ, ಸಿಟಿ ಕಾರ್ಯ ಒತ್ತಡ ಹೆಚ್ಚಾಯಿತು. ಇಲ್ಲಿಗೆ ಬಡವರೇ ಹೆಚ್ಚಾಗಿ ಸ್ಕಾ$ನ್​ಗೆ ಆಗಮಿಸುತ್ತಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರೂ ಎಂಆರ್​ಐ, ಸಿ.ಟಿ. ಸ್ಕಾ$ನಿಂಗ್​ಗಾಗಿ ಸರ್ಕಾರಿ ಆಸ್ಪತ್ರೆಗೆ ಆಗಮಿಸುತ್ತಿದ್ದು, ಕಠಿಣ ನಿಯವದಿಂದ ಸಂಕಷ್ಟ ಶುರುವಾಗಿದೆ.

ನಿಯಮಗಳೇನು...?

ವ್ಯದ್ಯರ ರೆರಲ್​ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಇಲಾಖೆ ಕ್ರಮವಹಿಸಿದೆ. ಸಿ.ಟಿ. ಮತ್ತು ಎಂಆರ್​ಐ ಯೋಜನೆಯನ್ನು ಎಸ್​ಎಎಸ್​ಟಿ ***(ಖಅಖಖ) ಮೂಲಕ ಅನುಷ್ಠಾನಗೊಳಿಸಿ ಯೋಜನೆಯು ಪಿಎಂಜೆಎವೈ&ಎಬಿಆರ್​ಕೆ ಕಾರ್ಯವಿಧಾನಗಳ ಪೂರ್ವ ದೃಢೀಕರಣ ಅನುಮತಿ ಪಡೆದು ಸ್ಕಾ$ನ್​ ಮಾಡಬೇಕು. ಅನುಮತಿ ಇಲ್ಲದೆ ಸ್ಕಾ$ನ್​ ಮಾಡಿದರೆ ಸದರಿ ಸ್ಕಾ$ನ್​ಗೆ ಪಾವತಿ ಮಾಡಲಾಗುವುದಿಲ್ಲ. ತುರ್ತು ಪ್ರಕರಣಗಳಲ್ಲಿ ಪೂರ್ವ ಅನುಮತಿ ಪಡೆಯದೆ ಸ್ಕಾ$ನ್​ ಮಾಡಿದರೂ ಕ್ಲೆಮ್​ ಅನುಮೋದನೆ ಸಮಯದಲ್ಲಿ ಪೂರ್ವ ಅನುಮತಿ ತುರ್ತು ಎಂದು ಕಂಡು ಬರದಿದ್ದರೆ ಅಂತಹ ಪ್ರಕರಣಗಳ ಪಾವತಿ ಮಾಡಲಾಗುವುದಿಲ್ಲ. ಜಿಲ್ಲಾ ಆಸ್ಪತ್ರೆಯು ತುರ್ತು ಅನುಮೋದನೆಗಳನ್ನು ನ್ಯಾಯಯುತವಾಗಿ ಬಳಸಲು ಸೂಚಿಸಿದೆೆ. ತುರ್ತು ಪ್ರಕರಣಗಳನ್ನು ಅನಗತ್ಯವಾಗಿ ಉಪಯೋಗಿಸಿದಲ್ಲಿ ಕಾರಣಕರ್ತರಾದವರ ಮೇಲೆ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.

ಎಬಿಆರ್​ಕೆ ಕಾರ್ಯವಿಧಾನದ ಪ್ರಕಾರವೇ ಎಸ್​ಎಎಸ್​ಟಿ ಲಾಗಿನ್​ನಲ್ಲಿಯೇ ಅಪ್​ಲೋಡ್​ ಮಾಡಬೇಕಾಗಿದೆ. ಆ ಕ್ಲೆಮ್​ಅನ್ನು ಆಸ್ಪತ್ರೆಯ ರೇಡಿಯೊಲಾಜಿಸ್ಟ್​, ಆರ್​ಎಂಒ ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರ ಸಹಿಯೊಂದಿಗೆ ಸಲ್ಲಿಸಬೇಕು, ಕೈ ಬಿಲ್​ ಸಲ್ಲಿಸಿದರೆ ಸ್ವೀಕರಿಸಲಾಗುದಿಲ್ಲ ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕರು ಸೊತ್ತೋಲೆ ಹೊರಡಿಸಿದ್ದಾರೆ.

 ತಜ್ಞರ ಸಲಹೆ ಮೇರೆಗೆ ಆದೇಶ

ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಕಾ$ನ್​ಗೆ ಅವಶ್ಯಕವಾಗಿ ಒಳಪಡಿಸುತ್ತಿರುವುದು, ಒಂದೇ ರೋಗಿಗೆ ಅಗತ್ಯ ಇಲ್ಲದಿದ್ದರೂ ಬಹು ಸ್ಕಾ$ನ್​ ಮಾಡಿಸುವುದು, ಸ್ಕಾ$ನ್​ಗೆ ಸಂಬಂಧಿಸಿದ ಪ್ರಯೋಗಾಲಯ ಪರೀೆಗಳನ್ನು ಮಾಡಿಸದೇ ರೆರಲ್​ ನೀಡಿರುವುದು, ತಜ್ಞರ ಸಂಬಂಧವಿಲ್ಲದೆ ಸ್ಕಾ$ನ್​ಗೆ ರೆರಲ್​ ನೀಡಿರುವುದು, ಒತ್ತಡಕ್ಕೆ ಮಣಿದು ರೆರಲ್​ ಮಾಡುವುದು ಕಂಡು ಬಂದಿದ್ದು ಇದನ್ನು ತಡೆಯಬೇಕಾಗಿದೆ ಎಂದು ತಜ್ಞರು ಇಲಾಖೆಗೆ ಸಲಹೆ ನೀಡಿದ್ದಾರೆ.

ಸಿಬ್ಬಂದಿಗೂ ತಲೆ ಬಿಸಿ

ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿ ಗಾಯಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸುತ್ತಾರೆ. ಆ ಸಂದರ್ಭದಲ್ಲಿ ರೋಗಿಯ ಬಳಿ ಆಧಾರ್​, ಪಡಿತರ ಚೀಟಿ ಇರುವುದರಿಲ್ಲ. ಅಂತಹ ಸಂದರ್ಭದಲ್ಲೂ ದಾಖಲೆ ಬೇಕೆ ಬೇಕು ಎಂದರೆ ಎಲ್ಲಿಂದ ತರಬೇಕು?. ದಾಖಲೆ ಇಲ್ಲದೆಯೂ ಶುಲ್ಕ ಪಾವತಿ ಮಾಡಿ ಸ್ಕಾ$ನ್​ ಮಾಡಿಸಿಕೊಂಡರು ದಾಖಲೆಗಳ ನೋಂದಣಿ ಆಗಲೇಬೇಕಾಗಿದೆ. ಇದು ರೋಗಿಗಳಿಗೆ ಪರದಾಟವಾದರೆ, ಸಿಬ್ಬಂದಿಗೂ ತಲೆ ಬಿಸಿಯಾಗಿ ಪರಿಣಮಿಸಿದೆ.

 ಆರೋಗ್ಯ ಮಿತ್ರ ಕೇಂದ್ರಕ್ಕೆ ಬೀಗ

ಆಯುಷ್ಮಾನ್​ ಭಾರತ್​&ಆರೋಗ್ಯ ಕರ್ನಾಟಕ ಯೋಜನೆ (ಆರೋಗ್ಯ ಮಿತ್ರ) ನೋಂದಣಿ ಮಾಡಿಸಲು ಶನಿವಾರ ಸುಮಾರು ಮಂದಿ ಕೇಂದ್ರಕ್ಕೆ ಬಂದು ವಾಪಸ್​ ತೆರಳಿದರು. ಶನಿವಾರ ಮಧ್ಯಾಹ್ನಕ್ಕೆ ಕೊಠಡಿಗೆ ಬೀಗ ಹಾಕಲಾಗಿತ್ತು. ಇನ್ನು ಭಾನುವಾರ ರಜೆ ಇರುವುದರಿಂದ ತೆಗೆಯುವುದಿಲ್ಲ. ಸಿಟಿ, ಎಂಆರ್​ಐ ಸ್ಕಾ$ನ್​ಗೆ ಎಬಿಆರ್​ಕೆಗೆ ನೋಂದಣಿ ಕಡ್ಡಾಯ ಮಾಡಿದ್ದು, ರೋಗಿಗಳು ಸಿಬ್ಬಂದಿ, ಅಧಿಕಾರಿಗಳಿಗೆ ಶಾಪ ಹಾಕಿದ್ದು ಕಂಡು ಬಂದಿತು.

" ಇಲಾಖೆಯ ಮೇಲಧಿಕಾರಿಗಳು ಸುತ್ತೋಲೆ ಹೊರಡಿಸಿದ್ದು, ಕಾರ್ಯಗತಗೊಳಿಸಲಾಗುತ್ತಿದೆ. ರೋಗಿಗೆ ಅವಶ್ಯಕತೆಯಿದ್ದರೆ ಮಾತ್ರ ಸ್ಕಾ$ನ್​ಗೆ ರೆರಲ್​ ಮಾಡುತ್ತಾರೆ. ಅನವಶ್ಯಕವಾಗಿ ವೈದ್ಯರು ರೆರಲ್​ ಮಾಡುತ್ತಿಲ್ಲ."

- ಹೆಸರು ಹೇಳಲಿಚ್ಛಿಸದ ಆರೋಗ್ಯ ಇಲಾಖೆಯ ಅಧಿಕಾರಿ