ಜಿಲ್ಲೆ

ಸ್ವಚ್ಛ ಭಾರತಕ್ಕೆ ಅಗತ್ಯ ಜನರ ಸಹಕಾರ : ಸಂಸದ ಕ್ಯಾ.ಬ್ರಿಜೇಶ್ ಚೌಟ ಪ್ರತಿಪಾದನೆ : ಎನ್ಆರ್ಎಫ್ ಘಟಕ ಉದ್ಘಾಟನೆ

ಸೌಮ್ಯ ಆರ್

ಮೂಲ್ಕಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತದ ಕನಸನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರಕ್ಕೆ ಜನರ ಸಂಪೂರ್ಣ ಸಹಕಾರ ಅಗತ್ಯ. ನಾಗರಿಕರು ಸ್ವಚ್ಛತಾ ಅಭಿಯಾನ ಬೆಂಬಲಿಸಿ ಹಸಿಕಸ, ಒಣಕಸ ಬೇರ್ಪಡಿಸಿ ಪರಿಣಾಮಕಾರಿ ರೀತಿಯಲ್ಲಿ ಉಪಯೋಗಿಸಿ ಸವಲತ್ತು ಮೂಲಕ ಅನುಷ್ಠಾನಗೊಳಿಸಿದರೆ ಸ್ವಚ್ಛ ನಗರ ಸಾಧ್ಯ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.

ಸ್ವಚ್ಛ ಭಾರತ್ ಮಿಷನ್(ನಗರ) 2.0 ಯೋಜನೆ ಅಡಿಯಲ್ಲಿ ಒಣ ತ್ಯಾಜ್ಯ ನಿರ್ವಹಣೆಗೆ 41.5 ಲಕ್ಷ ರೂ. ವೆಚ್ಚದ ಮೂಲ್ಕಿ ನ.ಪಂ.ನ ಎಂಆರ್‌ಎಫ್ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಸ್ವಚ್ಛತೆಯ ಪರಿಕಲ್ಪನೆ ಇದ್ದರೆ ಮಾತ್ರ ಆರೋಗ್ಯ ರಕ್ಷಣೆ ಸಾಧ್ಯವಿದೆ. ಸ್ವಚ್ಛತೆಯ ಮುಖಾಂತರ ಮೂಲ್ಕಿ ನಗರವನ್ನು ಮಾದರಿಯನ್ನಾಗಿಸಲು ನಾಗರಿಕರು ಸಹಕಾರ ನೀಡಿ ಎಂದರು.

ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್ ಅಧ್ಯಕ್ಷತೆ ವಹಿಸಿದ್ದರು. ನಗರ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮೀ, ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷರಾಜ ಶೆಟ್ಟಿ, ಸದಸ್ಯರಾದ ವಂದನಾ ಕಾಮತ್, ಶೈಲೇಶ್ ಕುಮಾರ್, ಸುಭಾಷ್ ಶೆಟ್ಟಿ, ರಾಧಿಕಾ ಕೋಟ್ಯಾನ್, ಭೀಮಾ ಶಂಕರ್, ಮುಖ್ಯಾಧಿಕಾರಿ ಮಧುಕರ್, ಮಾಜಿ ಸದಸ್ಯರಾದ ಉಮೇಶ್ ಮಾನಂಪಾಡಿ, ಪುರುಷೋತ್ತಮ ಬಡಗಹಿತ್ಲು, ಸ್ಥಳೀಯ ಬಿಜೆಪಿ ನಾಯಕರಾದ ದಿನೇಶ್ ಪುತ್ರನ್ ಬಳ್ಕುಂಜೆ, ರಂಗನಾಥ ಶೆಟ್ಟಿ, ಮನೋಹರ ಕೋಟ್ಯಾನ್, ವಿಠ್ಠಲ್ ಎನ್ ಎಂ, ಹರಿಶ್ಚಂದ್ರ ಕೋಟ್ಯಾನ್, ದೇವಪ್ರಸಾದ್ ಕೆಂಪುಗುಡ್ಡೆ, ನವೀನ್‌ರಾಜ್, ಅಶೋಕ್ ಜನನಿ, ಪ್ರವೀಣ್ ಕೋಟ್ಯಾನ್, ಮಹೀಮ್ ಹೆಗ್ಡೆ, ನವೀನ್ ಪುತ್ರನ್, ಎಚ್‌ಡಿಬಿ ಫೈನಾನ್ಸ್ ಕ್ರಸ್ಟರ್ ಮ್ಯಾನೇಜರ್ ಉಮೇಶ್ ಮತ್ತಿತರರು ಉಪಸ್ಥಿತರಿದ್ದರು. ಮುಖ್ಯಾಧಿಕಾರಿ ಮಧುಕರ್ ಸ್ವಾಗತಿಸಿದರು.