ನಾಲತವಾಡ ಸಮೀಪದ ಅಮರೇಶ್ವರ ದೇವಸ್ಥಾನ ಹತ್ತಿರ ನನೆಗುದಿಗೆ ಬಿದ್ದ ಕಾಲುವೆ ಕಾಮಗಾರಿಯನ್ನು ಶ್ರೀದಲ್ಲೇ ಆರಂಭಿಸಬೇಕು ಎಂದು ಆಗ್ರಹಿಸಿ ಯುವಜನ ಸಂಟನೆ ಅಧ್ಯಕ್ಷ ಶಿವಾನಂದ ವಾಲಿ ಆಮರಣ ಉಪವಾಸ ಸತ್ಯಾಗ್ರಹ ನಡೆಸಿದರು. ಮಾಜಿ ಜಿ.ಪಂ. ಸದಸ್ಯ ಗಂಗಾಧರ ನಾಡಗೌಡ, ಅಪ್ಪುಧಣಿ ನಾಡಗೌಡ, ಮುದಕಪ್ಪ ಗಂಗನಗೌಡರ, ಅಯ ನಾಡಗೌಡ ಇತರರಿದ್ದರು. 
ಜಿಲ್ಲೆ

ಕಾಲುವೆ ಕಾಮಗಾರಿ ಶ್ರೀ ಆರಂಭಿಸಿ

ಗಿರೀಶ ಸಗರ

ನಾಲತವಾಡ: ರೈತರ ಜಮೀನಿಗೆ ನೀರು ಹರಿಯುವವರೆಗೂ ಹೋರಾಟ ಮುಂದುವರಿಯುತ್ತದೆ. ನನ್ನ ಹೋರಾಟ ಪಕ್ಷಾತಿತ, ಜಾತ್ಯಾತಿತವಾಗಿದ್ದು, ಅಪಪ್ರಚಾರ ಮಾಡಿ ಹೋರಾಟ ಹತ್ತಿಕ್ಕಲು ಯತ್ನಿಸಿದರೆ ಅದು ಸಾಧ್ಯವಿಲ್ಲ ಎಂದು ಯುವಜನ ಸಂಟನೆ ಅಧ್ಯಕ್ಷ ಶಿವಾನಂದ ವಾಲಿ ಹೇಳಿದರು.

ಪಟ್ಟಣದ ವೀರೇಶ್ವರ ವೃತ್ತದಲ್ಲಿ ಶರಣ ವೀರೇಶ್ವರ ಪುತ್ಥಳಿಗೆ ಶನಿವಾರ ಪೂಜೆ ಸಲ್ಲಿಸಿ, ಆಮರಣ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಅಧಿಕಾರಿಗಳು ಕಳೆದ ಹತ್ತು ವರ್ಷಗಳಿಂದ ನಿದ್ರೆ ಮಾಡುತ್ತಿದ್ದರು.

ರೈತರು ಹೋರಾಟ ಮಾಡುತ್ತೇವೆ ಎಂದಾಗ ಸ್ಥಳಕ್ಕೆ ಬಂದು ಟೆಂಡರ್​ ಆಗಿದೆ ಎಂದು ತಪ್ಪು ಮಾಹಿತಿ ನೀಡಿ ಹೊರಾಟದ ದಿಕ್ಕು ಬದಲಿಸುವ ಕೆಲಸ ಮಾಡಿದ್ದಾರೆ. ನಮ್ಮ ಬೇಡಿಕೆ ಸ್ಪಷ್ಟವಾಗಿದೆ. ಚಿಮ್ಮಲಗಿ ಹಾಗೂ ನಾಗರಬೆಟ್ಟ ಏತ ನೀರಾವರಿ ಕಾಲುವೆ ಪೂರ್ಣಗೊಳಿಸಿ, ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ಕೊಡಬೇಕು. ಅಲ್ಲಿಯವರೆಗೂ ಹೋರಾಟ ಮುಂದುವರಿಯುವುದು ಎಂದರು.

ಮಾಜಿ ಜಿ.ಪಂ. ಸದಸ್ಯ ಗಂಗಾಧರ ನಾಡಗೌಡ ಮಾತನಾಡಿ, ಶಿವಾನಂದ ಅವರ ಹೋರಾಟ ನ್ಯಾಯವಾಗಿದೆ. ಕೆಬಿಜೆಎನ್​ಎಲ್​ ಅಧಿಕಾರಿಗಳು ಕಾಮಗಾರಿ ಆರಂಭ ಮಾಡದಿದ್ದರೆ ಹೋರಾಟ ಇನ್ನಷ್ಟು ಉಗ್ರವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಮುತ್ತು ಅಂಗಡಿ, ಕೆಂಚಪ್ಪಣ್ಣ ಬಿರಾದಾರ, ಗಿರೀಶಗೌಡ ಪಾಟೀಲ, ಸಂಗಣ್ಣ ಮೇಟಿ, ಮಹಾತಯ್ಯ ವಿರಕ್ತಮಠ, ಮೌನೇಶ ಮಾದರ, ಮಲ್ಲು ಗಂಗನಗೌಡರ ಹಾಗೂ ರೆತ ಮುಖಂಡರು ಮಾತನಾಡಿದರು.

ನಂತರ ವೀರೇಶ್ವರ ವೃತ್ತದಿಂದ ಮೂರು ಕಿ.ಮೀ. ವರೆಗೆ ಪಾದಯಾತ್ರೆ ಮೂಲಕ ಅಮರೇಶ್ವರ ದೇವಸ್ಥಾನ ಹತ್ತಿರ ಉಪವಾಸ ಸತ್ಯಾಗ್ರಹ ಮುಂದುವರಿಸಲಾಯಿತು.

ಶಿವಾನಂದ ವಾಲಿ ಹೋರಾಟಕ್ಕೆ ನಾಲತವಾಡ, ಸುತ್ತ ಮುತ್ತಲಿನ ರೆತರು, ಕನ್ನಡ ಪರ, ದಲಿತ, ರೈತ ಪರ ಸಂಟನೆಗಳು ಬೆಂಬಲ ವ್ಯಕ್ತ ಪಡಿಸಿದ್ದಾರೆ. ಧರಣಿ ಸ್ಥಳದಲ್ಲಿ ನೂರಕ್ಕು ಹೆಚ್ಚು ರೆತರು ಭಾಗಿಯಾಗಿದ್ದರು.

ಅಪ್ಪುಧಣಿ ನಾಡಗೌಡ, ಮುದಕಪ್ಪ ಗಂಗನಗೌಡರ, ಅಯ ನಾಡಗೌಡ, ಬಾಬು ಹಾದಿಮನಿ, ಸಂಗಣ್ಣ ಕುಳಗೇರಿ, ಜಿ. ಮಹಾಂತೇಶ ಗಂಗನಗೌಡರ, ಶರಣಪ್ಪ ಗಂಗನಗೌಡರ, ವೀರೇಶ ಅವೋಜಿ, ಸುನೀಲ ತ್ರಿ, ಅಂಬ್ರೇಶ ಹಟ್ಟಿ, ಚನ್ನಪ್ಪಗೌಡ ಹಂಪನಗೌಡರ, ರಫೀಕ ತೆಗ್ಗಿನಮನಿ, ಗುಂಡಪ್ಪ ಚಲವಾದಿ, ಯಲ್ಲಪ್ಪ ಚಲವಾದಿ ವೀರೇಶ ಕಂದಗಲ್ಲ, ಇತರ ರೈತ ಮುಖಂಡರು ಭಾಗವಹಿಸಿದ್ದರು.