ಜಿಲ್ಲೆ

ಬಂಡಾಯ ಏಳುವಂತೆ ಸಾಣೇಹಳ್ಳಿ ಶ್ರೀ ಕರೆ

Davangere - Desk - Mahesh Babu E

ಹೊಸದುರ್ಗ: ರಾಜ್ಯ ಸರ್ಕಾರ ಪ್ರಸ್ತಾವಿತ ಸಾವಿರ ಮದ್ಯದಂಗಡಿಯ ಯೋಜನೆ ಕೈಬಿಡುವಂತೆ ಒತ್ತಾಯಿಸಿ ರಾಜ್ಯದ ಜನರು ಈಗಲಾದರೂ ಬಂಡಾಯ ಏಳಬೇಕು. ಇಲ್ಲದಿದ್ದರೆ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಎಚ್ಚರಿಸಿದರು.

ಸಾಣೇಹಳ್ಳಿಯ ಮಠದಲ್ಲಿ ಸೋಮವಾರ ಮಾತನಾಡಿ, ಮದ್ಯದಂಗಡಿಗಳಿಗೆ ಪರವಾನಗಿ ನೀಡುವ ಸರ್ಕಾರದ ಕ್ರಮ ಜನವಿರೋಧಿ ಆಗಿದೆ ಎಂದು ಹೇಳಿದರು.

ಕರ್ನಾಟಕವನ್ನು ಕುಡುಕರ ರಾಜ್ಯವನ್ನಾಗಿಸಲು ಮುಂದಾಗುವುದು ಸರಿಯಲ್ಲ. ಈಗಾಗಲೇ ಕುಡಿತದ ಚಟದಿಂದ ಅನೇಕರು ಪ್ರಾಣ ಕಳೆದುಕೊಂಡಿದ್ದು, ಈ ಸಂಖ್ಯೆ ಹೆಚ್ಚುತ್ತಲೆ ಇದೆ ಎಂದರು..