ಮೈಸೂರು: ನರೇಂದ್ರ ಮೋದಿ ಪ್ರಧಾನಿಯಾಗಿ 11 ವರ್ಷ ಪೂರೈಸಿದ ಅಂಗವಾಗಿ ಜಿಲ್ಲಾ ದೇಹದಾರ್ಢ್ಯ ಮತ್ತು ಫಿಟ್ನೆಸ್ ಸಂಸ್ಥೆ, ರಾಕ್ ಜಿಮ್ ಮತ್ತು ಅರ್ನಾಲ್ಡ್ ಜಿಮ್ ಆಯೋಜಿಸಿರುವ ‘ಮಿಸ್ಟರ್ ಮೋದಿ ಕಪ್-2025’ ಅಂತರ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯ ಪೋಸ್ಟರ್ ಅನ್ನು ಸೋಮವಾರ ಬಿಡುಗಡೆ ಮಾಡಲಾಯಿತು.
ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಬಿಡುಗಡೆ ಮಾಡಿದರು. ಶಾಸಕ ಟಿ.ಎಸ್.ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಬಿಜೆಪಿ ಮುಖಂಡರಾದ ರಘು ಕೌಟಿಲ್ಯ, ಅನಿಲ್ ಥಾಮಸ್, ಮೈಸೂರು ನಗರ ಯುವ ಮೋರ್ಚಾ ನಿಕಟಪೂರ್ವ ಅಧ್ಯಕ್ಷ ಎಂ.ಜೆ.ಕಿರಣಗೌಡ ಸಾಥ್ ನೀಡಿದರು.
ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ನರೇಂದ್ರ ಮೋದಿ ಪ್ರಧಾನಿಯಾಗಿ 11 ವರ್ಷ ಪೂರೈಸಿದ ನೆನಪಿಗಾಗಿ ಎಂ.ಜೆ.ಕಿರಣಗೌಡ ನೇತೃತ್ವದಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ. ಇಂತಹ ಸ್ಪರ್ಧೆಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದರು.
ಆಯೋಜಕರಾದ ಮೈಸೂರು ನಗರ ಯುವ ಮೋರ್ಚಾ ನಿಕಟಪೂರ್ವ ಅಧ್ಯಕ್ಷ ಎಂ.ಜೆ.ಕಿರಣಗೌಡ ಮಾತನಾಡಿ, ಇದು ಅಂತರ ಜಿಲ್ಲಾ ಮಟ್ಟದ ಸ್ಪರ್ಧೆಯಾಗಿದ್ದು, ಮೈಸೂರು, ಮಂಡ್ಯ, ಹಾಸನ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಯ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಜುಲೈ 5ರಂದು ಮಧ್ಯಾಹ್ನ 3 ಗಂಟೆಗೆ ಹೆಬ್ಬಾಳದ ಯಜಮಾನ ಸರ್ಕಾಲ್‌ನಲ್ಲಿ ನಡೆಯಲಿದೆ.
ಎತ್ತರ ಆಧಾರಿತ ಸ್ಪರ್ಧೆ ಇದಾಗಿದ್ದು, ಒಟ್ಟು 4 ವಿಭಾಗದಲ್ಲಿ ನಡೆಯಲಿದೆ. ಶಾರ್ಟ್ ಕ್ಲಾಸ್ 165 ಸೆಂ.ಮೀ. ಒಳಗಿನ ವಿಭಾಗ, ಮೀಡಿಯಂ ಕ್ಲಾಸ್ 170 ಸೆಂ.ಮೀ.ಒಳಗೆ, ಟಾಲ್ ಕ್ಲಾಸ್ 175 ಸೆಂ.ಮೀ.ಒಳಗೆ ಹಾಗೂ ಸೂಪರ್ ಟಾಲ್ 175 ಸೆ.ಮೀ. ಮೇಲ್ಪಟ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಪ್ರತಿ ವಿಭಾಗದಲ್ಲಿ ಪ್ರಥಮ ಬಹುಮಾನ 5 ಸಾವಿರ ರೂ.ನಗದು, ಎರಡನೇ ಬಹುಮಾನ 4 ಸಾವಿರ ರೂ., 3ನೇ ಬಹುಮಾನ 3 ಸಾವಿರ ರೂ., 4ನೇ ಬಹುಮಾನ 2 ಸಾವಿರ ರೂ.ಹಾಗೂ 5ನೇ ಬಹುಮಾನ 1 ಸಾವಿರ ರೂ.ನಗದು ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ. ಅಲ್ಲದೆ ಮಿಸ್ಟರ್ ಮೋದಿ ಕಪ್ ಪಡೆಯುವ ವಿಜೇತರಿಗೆ 20 ಸಾವಿರ ರೂ. ನಗದು ಬಹುಮಾನ ನೀಡಲಾಗುತ್ತದೆ. ಮೋಸ್ಟ್ ಮಸ್ಕುೃಲರ್ ಪ್ರಶಸ್ತಿಗೆ 15 ಸಾವಿರ ರೂ. ಹಾಗೂ ಬೆಸ್ಟ್ ಪೋಜರ್‌ಗೆ 10 ಸಾವಿರ ರೂ.ನಗದು ಬಹುಮಾನ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಜತಗೆ ಇದೇ ವೇಳೆ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುತ್ತದೆ. ಬಡ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಿಸಲಾಗುತ್ತದೆ. ಆಟೋ ಚಾಲಕರಿಗೆ ಹಾಗೂ ಪೌರ ಕಾರ್ಮಿಕರಿಗೆ ಸಮವಸ್ತ್ರ ವಿತರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ನಗರ ಪಾಲಿಕೆ ಮಾಜಿ ಸದಸ್ಯರಾದ ಸುಬ್ಬಯ್ಯ, ಉಮೇಶ್, ಮೈಸೂರು ನಗರ ಯುವಾ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ, ಉಪಾಧ್ಯಕ್ಷರಾದ ಕಾರ್ತಿಕ್, ಪುನೀತ್, ಆಯೋಜಕರಾದ ಮಂಜುನಾಥ್, ಅವಿನಾಶ್ ಇತರರಿದ್ದರು. ಹೆಚ್ಚಿನ ಮಾಹಿತಿಗೆ ಮೊ.7204873915 ಸಂಪರ್ಕಿಸಲು ಕೋರಲಾಗಿದೆ.