ಸಿಂಧನೂರು ತಾಲೂಕಿನ ಆರ್.ಎಚ್.ನಂ.01 ಬರ್ಮಾಕ್ಯಾಂಪ್‌ನಲ್ಲಿ ಶ್ರೀ ಬಾಲಮುರುಗನ್ ಜಾತ್ರೋತ್ಸವ ಅಂಗವಾಗಿ ಆಯೋಜಿಸಿದ್ದ ಮೆರವಣಿಗೆಯಲ್ಲಿ ವೆಲ್ ಮುರುಗನ್ ಅವರು ಕಾವಡಿಯನ್ನು ಹೊತ್ತುಕೊಂಡು ಸಾಗಿದರು. 
ಜಿಲ್ಲೆ

ಶ್ರೀ ಬಾಲಮುರುಗನ್ ಪರಿಷೆ ಸಂಪನ್ನ

ರುದ್ರಪ್ಪ ವಾಲಿ

ಸಿಂಧನೂರು: ತಾಲೂಕಿನ ಆರ್.ಎಚ್.ನಂ.1 ಬರ್ಮಾ ಕ್ಯಾಂಪ್‌ನಲ್ಲಿ ಮಂಗಳವಾರ ಶ್ರೀ ಬಾಲಮುರುಗನ್ ಅವರ ಜಾತ್ರೆ ವಿಜೃಂಭಣೆಯಿಂದ ಜರುಗಿತು.

ಪ್ರತಿ ವಷರ್ದಂತೆ ಒಂಬತ್ತು ದಿನಗಳ ಕಾಲ ಪ್ರತಿ ದಿನ ಪೂಜೆ ಸಲ್ಲಿಸಿ ಹತ್ತನೇ ದಿನ ಗಂಗೆ ಸ್ಥಳಕ್ಕೆ ಹೋಗಿ ಅಲ್ಲಿಂದ ತೆರಳುವಾಗ ಮೈನವರೇಳಿಸುವಂತೆ ಶಸ್ತ್ರಗಳನ್ನು ಚುಚ್ಚಿಕೊಂಡು ವೆಲ್ ಮುರುಗನ್ ಕಾವಡಿಯನ್ನು ಹೊತ್ತುಕೊಂಡು ಮೆರವಣಿಗೆ ಉದ್ದಕ್ಕೂ ದೇವರ ನಾಮ ಸ್ಮರಿಸಲಾಗುತ್ತದೆ.

ಹರಕೆ ಹೊತ್ತ ಭಕ್ತರು ಶಿಲಾಕಾವಡಿ ಮತ್ತು ವಿವಿಧ ಶಸ್ತ್ರ ಚುಚ್ಚಿಕೊಳ್ಳುವ ಮೂಲಕ ಭಕ್ತಿ ಪರಾಕಾಷ್ಠೆ ಮೆರೆದರು.