ಹನುಮಸಾಗರದಲ್ಲಿ ಸಂಸದ ಸಂಗಣ್ಣ ಕರಡಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮನವಿ ಸಲ್ಲಿಸಲಾಯಿತು. ಪದಾಧಿಕಾರಿಗಳಾದ ಯಮನೂರಪ್ಪ ಮಡಿವಾಳರ, ಉಮೇಶ್ ಬಾಚಲಾಪುರ, ಮುತ್ತಣ್ಣ ಕಟಗಿ, ಬಸಪ್ಪ ಮೋಟಗಿ, ಇಸ್ಮಾಯಿಲಸಾಬ ತಹಶೀಲ್ದಾರ ಇತರರಿದ್ದರು. 
ಜಿಲ್ಲೆ

ಗೋಶಾಲೆ-ಮೇವು ಬ್ಯಾಂಕ್ ತೆರೆಯಿರಿ; ಸಂಸದರಿಗೆ ರೈತ ಸಂಘ ಮನವಿ

Gangavati - Mohan Kumar H R

ಹನುಮಸಾಗರ: ಮುಂಗಾರು ಕೈಕೊಟ್ಟಿದ್ದರಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಕೂಡಲೇ ಕುಷ್ಟಗಿ ತಾಲೂಕನ್ನು ಬರಪೀಡಿತ ಎಂದು ಘೋಷಿಸುವಂತೆ ಸಂಸದ ಸಂಗಣ್ಣ ಕರಡಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಭಾನುವಾರ ಮನವಿ ಸಲ್ಲಿಸಲಾಯಿತು.

ಮಳೆ ಅಭಾವದಿಂದ ಬೆಳೆ ಒಣಗುತ್ತಿದ್ದು, ಆತಂಕ ಪಡುವಂತಾಗಿದೆ. ಕೂಡಲೇ ಸರ್ಕಾರಗಳು ನೆರವಿಗೆ ಬರಬೇಕು. ತಾಲೂಕಿನ ಎಲ್ಲ ಹೋಬಳಿ ವ್ಯಾಪ್ತಿಯಲ್ಲಿ ಗೋಶಾಲೆ-ಮೇವು ಬ್ಯಾಂಕ್‌ಗಳನ್ನು ತೆರೆಯಬೇಕು. ಪಟ್ಟಣ ಹಾಗೂ ಸುತ್ತ್ತಲಿನ ಕೆರೆಗಳನ್ನು ತುಂಬಿಸಬೇಕು.

ಅರೆಬರೆಯಾಗಿರುವ ಜೆಜೆಎಂ ಕಾಮಗಾರಿ ಕೂಡಲೇ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಆದೇಶ ಮಾಡಬೇಕು. ಹನುಮಸಾಗರ ಪಶುಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಪರಿಹರಿಸಬೇಕು ಎಂದು ಮನವಿಯಲ್ಲಿ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಪದಾಧಿಕಾರಿಗಳಾದ ಯಮನೂರಪ್ಪ ಮಡಿವಾಳರ, ಉಮೇಶ್ ಬಾಚಲಾಪುರ, ಮುತ್ತಣ್ಣ ಕಟಗಿ, ಬಸಪ್ಪ ಮೋಟಗಿ, ಇಸ್ಮಾಯಿಲಸಾಬ ತಹಶೀಲ್ದಾರ, ಸಿರಾಜುದ್ದೀನ್ ಮೂಲಿಮನಿ, ಮುತ್ತಣ್ಣ ಹಲಕೂಲಿ, ಶಿವಕಾಂತಪ್ಪ ಹಾದಿಮನಿ, ಖಾಜೇಸಾಬ್ ಭಾಗವಾನ, ಕರಿಸಿದ್ದಪ್ಪ ನಿಡಗುಂದಿ, ಶರಣಪ್ಪ ಪಲ್ಲೇದ, ನಾಗರಾಜ ಮುಳಗುಂದ, ಸಂಗಪ್ಪ ಹಕ್ಕಿ, ಬಸವರಾಜ ಜಗಳೂರು ಇತರರಿದ್ದರು.