ಚನ್ನರಾಯಪಟ್ಟಣ : ಗುಣಮಟ್ಟದ ಹಾಲು ಸರಬರಾಜು ಮಾಡುವುದರಿಂದ ಸಂಕ್ಕೆ ವಾರ್ಷಿಕ 5.36 ಲಕ್ಷ ರೂಪಾಯಿ ನಿವ್ವಳ ಲಾಭ ಬಂದಿದ್ದು, ಸಂ ಅಭಿವೃದ್ಧಿಯಾಗುತ್ತಿದೆ ಎಂದು ಬಮುಲ್ ನಿರ್ದೇಶಕ ಎಸ್.ಪಿ.ಮುನಿರಾಜ್ ಹೇಳಿದರು.
ದೇವನಹಳ್ಳಿ ತಾಲೂಕು ಬೆಟ್ಟಕೋಟೆ ಹಾಲು ಉತ್ಪಾದಕರ ಸಹಕಾರ ಸಂದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಹೈನುಗಾರಿಕೆ ಮಾಡುವ ರೈತರಿಗೆ ಬಮುಲ್ನಿಂದ ಹಲವು ಸೌಲಭ್ಯಗಳು ಸಿಗುತ್ತಿವೆ. ರಾಸುಗಳ ತಪಾಸಣೆಗೆ ಬಮುಲ್ನಿಂದ ಪಶುವೈದ್ಯರನ್ನು ನೇಮಕ ಮಾಡಲಾಗಿದೆ. ಸಂದಲ್ಲಿ ಕೂಪನ್ ಹಾಕಿದರೆ ಮನೆ ಬಾಗಿಲಿಗೆ ಪಶು ವೈದ್ಯರು ಬರುತ್ತಾರೆ. ರೈತರು ರಾಸುಗಳ ವಿಮೆ ಮಾಡಿಸಬೇಕು. ಅದರಿಂದ ಅರ್ಧ ಹಣ ರೈತರು ಕಟ್ಟಿದರೇ ಇನ್ನರ್ಧ ಬಮುಲ್ ಭರಿಸುತ್ತದೆ ಎಂದರು. ಸಂದ ಅಧ್ಯಕ್ಷ ವಸಂತ್ ಕುಮಾರ್ ಮಾತನಾಡಿ, ಗುಣಮಟ್ಟದ ಹಾಲು ಸರಬರಾಜು ಮಾಡುವ ರೈತರಿಗೆ ಶೇ.2 ಬೋನಸ್ ಸಿಗಲಿದೆ ಎಂದು ಹೇಳಿದರು. ನಿರ್ದೇಶಕರಾದ ಸುರೇಶ್, ತಿಮ್ಮೇಗೌಡ, ನಾಗೇಂದ್ರ ಸ್ವಾಮಿ, ಲಕ್ಷ$್ಮಮ್ಮ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ನಾರಾಯಣಸ್ವಾಮಿ, ಹಾಲು ಪರೀಕ್ಷಕ ಮುರಳಿಧರ್ ಇತರರು ಇದ್ದರು.