ಜಿಲ್ಲೆ

ಹೈನುಗಾರರಿಗೆ ಸರ್ಕಾರದ ಸಕಲ ಸೌಲಭ್ಯ

ಶಿವರಾಜ.ಎಂ

ಎಂಪಿಸಿಎಸ್‌ಅಧ್ಯಕ್ಷ ರಾಜೇಶ್ ಭರವಸೆ

ಒಗ್ಗಟ್ಟಿನಿಂದ ಸಂಘ ಮುನ್ನಡೆಸುವ ವಿಶ್ವಾಸ


ವಿಜಯವಾಣಿ ಸುದ್ದಿಜಾಲ ನಂದಗುಡಿ
ಹೋಬಳಿಯ ಬೈಲನರಸಾಪುರ ಗ್ರಾಪಂನ ಹೆಡಕನಹಳ್ಳಿ ಎಂಪಿಸಿಎಸ್ ಅಧ್ಯಕ್ಷರಾಗಿ ಎಚ್.ಜಿ.ರಾಜೇಶ್ ಹಾಗೂ ಉಪಾಧ್ಯಕ್ಷರಾಗಿ ಮಂಜುನಾಥ್ ಎಚ್.ಸಿ.ಅವಿರೋಧ ಆಯ್ಕೆಯಾದರು.
ಹೆಡಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಿಗದಿಯಾಗಿದ್ದ ಚುನಾವಣಾ ಪ್ರಕ್ರಿಯೆಯಲ್ಲಿ ಎಲ್ಲ 11 ನಿರ್ದೇಶಕರು ಚರ್ಚಿಸಿ, ಒಮ್ಮತದೊಂದಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದು ನಾಮಪತ್ರ ಸಲ್ಲಿಸಿದ್ದದರಿಂದ ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ನಾಗರಾಜ್ ತಿಳಿಸಿದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಜಶೇಖರಗೌಡ ಮಾತನಾಡಿ, ಪಕ್ಷ ಭೇದ ಮರೆತು ಸಂಘವನ್ನು ಆರ್ಥಿಕವಾಗಿ ಸದೃಢಗೊಳಿಸಿ, ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಿ, ಸಂಘವನ್ನು ಪ್ರಗತಿ ಪಥದಲ್ಲಿ ಮುನ್ನೆಡಸಬೇಕು ಎಂದರು.
ನೂತನ ಅಧ್ಯಕ್ಷ ಎಚ್.ಜಿ.ರಾಜೇಶ್ ಮಾತನಾಡಿ, ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘವನ್ನು ಪ್ರಗತಿಯತ್ತ ಕೊಂಡೊಯ್ಯುತ್ತೇನೆ. ಗುಣಮಟ್ಟದ ಹಾಲು ಸಂಗ್ರಹಿಸಲು ಹೆಚ್ಚಿನ ಕಾಳಜಿ ವಹಿಸಲಾಗುವುದು. ಹೈನುಗಾರರ ಹಿತ ಕಾಪಾಡಲು, ಸರ್ಕಾರದ ಸವಲತ್ತುಗಳನ್ನು ಸಮರ್ಪಕವಾಗಿ ಒದಗಿಸಲಾಗುವುದು ಎಂದು ಹೇಳಿದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಶಾಸಕ ಶರತ್ ಬಚ್ಚೇಗೌಡ, ನೆಲವಾಗಿಲು ಎಸ್‌ಎಫ್‌ಸಿಎಸ್ ಅಧ್ಯಕ್ಷ ಎಸ್.ಮಂಜುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಎನ್.ಧರ್ಮೇಶ್ ಸನ್ಮಾನಿಸಿದರು.
ಡೇರಿ ನಿರ್ದೇಶಕರಾದ ಎಚ್.ಎನ್.ಬೈರೇಗೌಡ, ಶ್ರೀನಿವಾಸ್, ಎಚ್.ಸಿ.ಬೈರೇಗೌಡ, ಮುನಿರಾಜು, ಸಂಗೀತಾ, ವೆಂಕಟಲಕ್ಷ್ಮಮ್ಮ, ಸುಜಾತಾ, ಶಾಮಲಮ್ಮ, ಎಚ್.ಎ.ಪ್ರಕಾಶ್, ಮುಖಂಡರಾದ ವೆಂಕಟಸ್ವಾಮಪ್ಪ, ಚಿನ್ನಯ್ಯಪ್ಪ, ವೆಲ್ಡಿಂಗ್ ರವಿ, ಸುಜಯ್ ಕುಮಾರ್, ನಾಗರಾಜ್, ಮಂಜು ಬಡಗಿ, ಮುಖ್ಯ ಕಾರ್ಯನಿರ್ವಾಹಕ ಎಚ್.ದಿವಾಕರ್ ಹಾಜರಿದ್ದರು.