RAICHUR 
ಜಿಲ್ಲೆ

ಸಂಸದರಿAದ ೫೦೦ ಹಾಲು ಉತ್ಪಾದಕರ ಸಹಕಾರ ಸಂಘಗಳ ರಚನೆಗೆ ಗುರಿ

Raichur - Reporter - Rachhai Swamy

 ರಾಯಚೂರು ಸುಸ್ಥಿರ ಜೀವನೋಪಾಯ ಕೈಗೊಳ್ಳುವ ಉದ್ದೇಶದಿಂದ ಜಿಲ್ಲಾದ್ಯಂತ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘಗಳನ್ನು ರಚಸಿಕೊಳ್ಳಬೇಕೆಂದು ಜಿ¯್ಲÁ ಪಂಚಾಯತ ಉಪ ಕಾರ್ಯದರ್ಶಿ ಶಶಿಕಾಂತ ಶಿವಪೂರೆ ಹೇಳಿದರು.

ನಗರದ ಜಿಪಂ ಸಭಾಂಗನದಲ್ಲಿ ಶುಕ್ರವಾರ ೪೫ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಚುನಾವಣೆಗಳನ್ನು ಮುಕ್ತಾಯಗೊಳಿಸಿರುವ ನಿಮಿತ್ತ ಚುನಾವಣೆಯಾದ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಅಥವಾ ಮುಖ್ಯ ಪ್ರವರ್ತಕರುಗಳಿಗೆ ಸುಸ್ಥಿರ ಜೀವನೋಪಾಯ ಕೈಗೊಳ್ಳಲು ಸಹಕಾರ ಸಂಘಗಳ ಉತ್ತೇಜನಕ್ಕಾಗಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಸದರು ಜಿ¯್ಲÉಯಲ್ಲಿ ಸುಮಾರು ೧೦೦ ಹಾಲು ಉತ್ಪಾಕರ ಸಹಕಾರಿ ಸಂಘ ರಚನೆ ಮಾಡುವ ದೂರದೃಷ್ಠಿಯನ್ನು ಹೊಂದಿರುತ್ತಾರೆ, ಗ್ರಾಮಿಣ ಪ್ರದೇಶದಲ್ಲಿ ಹೈನುಗಾರಿಕೆಯನ್ನು ಪ್ರೋತ್ಸಾಹಿಸಿ, ಹಾಲಿಗೆ ಮಾರುಕಟ್ಟೆ ಒದಗಿಸುವುದರ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ,

ದೈನಂದಿನ ವ್ಯವಹಾರದೊಂದಿಗೆ ಸ್ವ-ಸಹಾಯ ಗುಂಪುಗಳ ಪರಿಕಲ್ಪನೆಯನ್ನು ಅಳವಡಿಸಿ ಹಾಲು ಉತ್ಪಾದಕ ಮಹಿಳೆಯರನ್ನು ಸಂಘಟಿಸಿ ಅವರಲ್ಲಿ ನಾಯಕತ್ವ ಗುಣವನ್ನು ಮೂಡಿಸಲು ಸಹಕಾರಿವಾಗಿದ್ದು, ಇದರಿಂದ ಸಹಕಾರ ಸಂಘಗಳಲ್ಲಿ ಮಹಿಳೆಯರ ಪಾಲ್ಗೋಳ್ಳುವಿಕೆ ಹೆಚ್ಚಾಗಿ ಇವರನ್ನು ಮುಖ್ಯವಾಹಿನಿಗೆ ತರಬೇನ್ನುವ ಉದ್ದೇಶ ಈಡೇರಿಸಿದಂತಾಗುತ್ತದೆ, ಇದರಿಂದ ಉಳಿತಾಯ ಪ್ರವೃತ್ತಿಯನ್ನು ರೂಢಿಸಬಹುದು, ಆಂತರಿಕ ಸಾಲವನ್ನು ಅವಶ್ಯಕತೆಗೆ ತಕ್ಕಂತೆ ಪಡೆಯಬಹುದು,

ಈ ಸಾಲದ ಮೋತ್ತದಿಂದ ರಾಸುಗಳ ಖರೀಽಯನ್ನು ಪ್ರೋತ್ಸಾಹಿಸಿ ಹೈನುಗಾರಿಕೆ ಮಾಡುವರ ಸಂಖ್ಯೆ ಹೆಚ್ಚಿಸಬಹುದಾಗಿದೆ ಎಂದರು.

ಹಾಲು ಉತ್ಪಾದಕರ ಸಹಕಾರ ಸಂಘ ಒಕ್ಕೂಟ ಬಳ್ಳಾರಿ ವ್ಯವಸ್ಥಾಪಕ ನಿರ್ದೇಶಕ ಪ್ರಭುಶಂಕರ ಮಾತನಾಡಿ, ಪಶು ಇಲಾಖೆಯಿಂದ ಅನುಗ್ರಹ ಯೋಜನೇಡಿ ಯಾವುದೇ ಹಸು ಮರಣ ಹೊಂದಿದರೆ ೧೦ ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು. ಇದಕ್ಕೆ ವಿಮೇ ಅವಶ್ಯಕತೆಯಿಲ್ಲ, ಕೆಎಂಎ-ï ವತಿಯಿಂದ ಒಬ್ಬ ಡಾಕ್ಟರ್ ಸೌಲಭ್ಯ ಒದಗಿಸುವುದು. ರಾಸುಗಳಿಗೆ ಆಹಾರ ಸೌಲಬ್ಯ ಒದಗಿಸುವುದು, ಕಡ್ಡಾಯವಾಗಿ ವಿಮೇ ಮಾಡಿಸುವುದು. ಹಾಲಿನ ಉತ್ಪಾನೆ ಹೆಚ್ಚಿಸಲು ತರಬೇತಿ ನೀಡಲಾಗುವುದು ಎಂದರು.

ಈ ಸಂಧರ್ಭದಲ್ಲಿ ಉಪ ವ್ಯವಸ್ಥಾಕರು ಎ.ಹನುಮಂತರೆಡ್ಡಿ, ಮುಖ್ಯ ಪಶುವೈದ್ಯಾಽಕಾರಿ ಶ್ರಿನಿವಾಸ ಮೂರ್ತಿ, ಸಹಕಾರಿ ಸಂಘ ನೋದಣಿ ಇಲಾಖೆ ಸಿದ್ದಣ್ಣ, ಎನ್‌ಆರ್‌ಎಲ್‌ಎಂ ಜಿ¯್ಲÁ ವ್ಯವಸ್ಥಾಪಕರು ವಿಜಯಕುಮಾರ, ಶ್ರೀಕಾಂತ ಬನ್ನಿಗೊಳ ಸೇರಿ ಅನೇಕರು ಇದ್ದರು.