ಜಿಲ್ಲೆ

ಮತದಾರರಿಗೆ ಸಂಸದ ಯದುವೀರ್ ಕೃತಜ್ಞತೆ

ಆರ್.ಕೃಷ್ಣ

ಮೈಸೂರು: ಮೈಸೂರು-ಕೊಡಗು ಲೋಕಸಭಾದ ನೂತನ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕೆ.ಆರ್.ಕ್ಷೇತ್ರದಲ್ಲಿ ಸೋಮವಾರ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಕೆ.ಆರ್.ಕ್ಷೇತ್ರ ವ್ಯಾಪ್ತಿಯ ಟಿ.ಕೆ.ಬಡಾವಣೆ, ಕುವೆಂಪುನಗರ, ವಿವೇಕಾನಂದನಗರ, ಬೆಮೆಲ್ ಕಮಾನ್, ಚಿನ್ನಗಿರಿಕೊಪ್ಪಲು ಸೇರಿದಂತೆ ವಿವಿಧೆಡೆ ಕೃತಜ್ಞತಾ ಸಭೆಗಳನ್ನು ನಡೆಸುವ ಮೂಲಕ ಮತದಾರರಿಗೆ ಧನ್ಯವಾದ ಅರ್ಪಿಸಿದರು.
ಈ ವೇಳೆ ಮಾತನಾಡಿದ ಯದುವೀರ್, ನಿಮ್ಮೆಲ್ಲರ ಸಹಕಾರದಿಂದ ಒಂದೂವರೇ ಲಕ್ಷ ಮತಗಳ ಅಂತರದಿಂದ ಗೆಲುವು ಪಡೆಯಲು ಸಾಧ್ಯವಾಗಿದೆ. ಇದಕ್ಕಾಗಿ ನಿಮ್ಮೆಲ್ಲರಿಗೂ ಅಭಾರಿಯಾಗಿದ್ದು, ಕೃತಜ್ಞತೆ ಸಲ್ಲಿಸಲು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆ ಎಂದು ಹೇಳಿದರು.
ನಿಮ್ಮ ಹಾಗೂ ನಿಮ್ಮ ಬಡಾವಣೆಯ ಯಾವುದೇ ಕುಂದು-ಕೊರತೆ, ಸಮಸ್ಯೆಗಳಿದ್ದರೆ ನನ್ನನ್ನು ನೇರವಾಗಿ ಭೇಟಿ ಮಾಡಿ. ಸದ್ಯದಲ್ಲಿಯೇ ಸಂಸದರ ಕಚೇರಿ ಆರಂಭವಾಗಲಿದ್ದು, ಕಚೇರಿ ಯಾವಾಗಲೂ ನಿಮಗೆ ತೆರೆದಿರುತ್ತದೆ ಎಂದು ಹೇಳಿದರು.
ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಮೇಯರ್ ಶಿವಕುಮಾರ್, ಮಂಡಲ ಅಧ್ಯಕ್ಷ ರಘು ಅರಸ್, ನಗರಪಾಲಿಕೆ ಮಾಜಿ ಸದಸ್ಯರಾದ ಜಗದೀಶ್, ರಮೇಶ್, ಚಂಪಕ, ಗೀತಾ ಶ್ರೀಯೋಗಾನಂದ, ಮುಖಂಡರಾದ ಕೇಬಲ್ ರಮೇಶ್, ಶಂಕರ್, ಜಗದೀಶ್, ಜೋಗಿ ಮಂಜು, ಅಮ್ಮ ಸಂತೋಷ್, ರಾಕೇಶ್‌ಗೌಡ, ರಾಜೇಶ್, ಜಯಶಂಕರ್, ನಿಶಾಂತ್, ಹೇಮಂತ್, ಗಿರೀಶ್, ಸತೀಶ್, ಮಂಜುನಾಥ್, ಮನೋಜ್ ಇತರರು ಇದ್ದರು.