ವಿಜಯಪುರ ನಗರದ ವಾಡ್ ನಂ.6 ರಲ್ಲಿ ಪಂ. ದೀನ್ ದಯಾಳ ಉಪಾಧ್ಯಾಯರ ಜಯಂತ್ಯುತ್ಸವ ಆಚರಿಸಲಾಯಿತು. ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಸಂದೀಪ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮತ್ತಿತರರಿದ್ದಾರೆ.  
ಜಿಲ್ಲೆ

ಪಂ. ದೀನದಯಾಳ ಉಪಾಧ್ಯಾಯರ ಜಯಂತ್ಯುತ್ಸವ, ರಾಷ್ಟ್ರೀಯ ಚಿಂತನೆಗಳನ್ನು ಮೈಗೂಡಿಸಿಕೊಳ್ಳೋಣ ಎಂದ ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಮಹಾನ್ ರಾಷ್ಟ್ರೀಯವಾದಿ ಪಂ. ದೀನದಯಾಳ ಉಪಾಧ್ಯಾಯರ ಸಮರ್ಪಣಾ ಮನೋಭಾವ, ರಾಷ್ಟ್ರೀಯ ಚಿಂತನೆಗಳನ್ನು ಮೈಗೂಡಿಸಿಕೊಳ್ಳೋಣ ಎಂದು ಸಂಸದ ರಮೇಶ ಜಿಗಜಿಣಗಿ ಕಾರ್ಯಕರ್ತರಿಗೆ ಹೇಳಿದರು.

ನಗರದ ವಾಡ್ ನಂ.6 ರಲ್ಲಿ ಪಂ. ದೀನ್ ದಯಾಳ ಉಪಾಧ್ಯಾಯರ ಜಯಂತ್ಯುತ್ಸವದ ಹಿನ್ನೆಲೆ ಗುರುವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮತ್ತು ಪಂ. ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿ ಅವರು ಮಾತನಾಡಿದರು.

ದೇಶದಲ್ಲಿಯೇ ಅತ್ಯಂತ ದೊಡ್ಡ ರಾಜಕೀಯ ಪಕ್ಷವಾಗಿ ಬಿಜೆಪಿ ಬೆಳೆಯುವಲ್ಲಿ ಪಂ.ದೀನದಯಾಳ ಉಪಾಧ್ಯಾಯ ಅವರ ಸಮರ್ಪಣಾ ಮನೋಭಾವ, ದೂರದೃಷ್ಟಿಯ ಜನಪರ ಚಿಂತನೆ ಕಾರಣ. ಅನೇಕ ತ್ಯಾಗಗಳನ್ನು ಮಾಡಿ ಈ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಈ ಪಕ್ಷ ನಮಗೆ ಮಾತೃ ಸಮಾನ. ಅವರು ಕಟ್ಟಿದ ಪಕ್ಷ ಇಂದು ಹೆಮ್ಮರವಾಗಿ ಬೆಳೆದಿದೆ. ದಿ. ಅಟಲ್ ಬಿಹಾರಿ ವಾಜಪೇಯಿ, ದಿ.ಲಾಲ್ ಕೃಷ್ಣ ಅಡ್ವಾಣಿ, ಪ್ರಸ್ತುತ ನರೇಂದ್ರ ಮೋದಿಜಿ ಸೇರಿದಂತೆ ಅನೇಕ ನಾಯಕರಿಗೆ ಉಪಾಧ್ಯಾಯರ ಆದರ್ಶಗಳೇ ಸ್ಪೂರ್ತಿ. ಸರಳ ವ್ಯಕ್ತಿತ್ವದ ಪಂ.ದೀನದಯಾಳ ಅವರು ತಮ್ಮ ಬಟ್ಟೆಗಳನ್ನು ತಾವೇ ತೊಳೆಯುತ್ತಿದ್ದರು. ಪ್ರಖರ ಬರಹಗಾರರು, ರಾಷ್ಟ್ರೀಯ ಚಿಂತಕರೂ, ಅದಮ್ಯ ದೇಶಭಕ್ತರಾಗಿದ್ದ ಪಂ.ದಿನದಯಾಳ ಉಪಾಧ್ಯಾಯರಲ್ಲಿದ್ದ ದೇಶಪ್ರೇಮ, ಜನಕಳಕಳಿಯ ಗುಣವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಸಂದೀಪ ಪಾಟೀಲ ಮಾತನಾಡಿ, ಪಂಡಿತ ದೀನದಯಾಳ ಉಪಾಧ್ಯಯರು ಅಪ್ರತಿಮ ದೇಶಭಕ್ತರು. ಆದರ್ಶ ಚಿಂತಕರು, ಸಮಾಜ ಸುಧಾರಕರು, ಪ್ರಬುದ್ದ ತತ್ವಜ್ಞಾನಿ, ಮೇಧಾವಿ, ಅರ್ಥಶಾಸ್ತ್ರಜ್ಞರು, ರಾಷ್ಟ್ರ ನಿರ್ಮಾಪಕರು, ಮೌಲ್ಯನಿಷ್ಠ ಪತ್ರಕರ್ತರು ಹಾಗೂ ಉತ್ತಮ ಸಾಹಿತಿ...ಹೀಗೆ ಪರಿಪೂರ್ಣ ವ್ಯಕ್ತಿತ್ವ ಹೊಂದಿದವರಾಗಿದ್ದರು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಳುಗೌಡ ಪಾಟೀಲ, ಉಮೇಶ ಕಾರಜೋಳ, ಚಂದ್ರಶೇಖರ ಕವಟಗಿ, ಗೋಪಾಲ ಘಟಕಾಂಬಳೆ, ಸುರೇಶ ಬಿರಾದಾರ, ಭೀಮಶಂಕರ ಹದನೂರು, ವಿಜಯ ಜೋಶಿ, ರಾಹುಲ್ ಜಾಧವ, ಉಪ ಮಹಾಪೌರ ಸುಮಿತ್ರಾ ಜಾಧವ, ಮಹೇಂದ್ರ ನಾಯಕ, ಬಸವರಾಜ ಹಳ್ಳಿ, ಮಹೇಶ ಒಡೆಯರ್, ಸಪ್ನಾ ಕಣಮುಚನಾಳ, ಕೃಷ್ಣಾ ಗುನ್ನಾಳಕರ, ಪಾಪುಸಿಂಗ್ ರಜಪೂತ, ಚಿನ್ನು ಚಿನಗುಂಡಿ, ಎಸ್.ಎ. ಪಾಟೀಲ, ರಾಜಕುಮಾರ ಸಗಾಯಿ, ರಾಘವೇಂದ್ರ ಕಾಪಸೆ, ರಾಜೇಶ ತಾವಸೆ, ಮಲ್ಲಮ್ಮ ಜೋಗೂರ, ಸಂತೋಷ ನಿಂಬರಗಿ, ರಾಮಚಂದ್ರ ಚವಾಣ್, ವಿಜಯ ಹಿರೇಮಠ, ಶೇಖರ ಬಾಗಲಕೋಟ, ರಾಜು ಹಿಪ್ಪರಗಿ, ಅಶೋಕ ಲಾಡ್, ರಾಯಪ್ಪ ಹಳ್ಳಿ, ಅಪ್ಪಾಸಾಹೇಬ ಕೋಟ ಮತ್ತಿತರರಿದ್ದರು.