ಉಡುಪಿ: ಕೋಟೇಶ್ವರದಿಂದ ಪ್ರಾರಂಭವಾಗಿ ಹೆಜಮಾಡಿವರೆಗೆ 26 ಕಿ.ಮೀ. ಸರ್ವೀಸ್ ರಸ್ತೆ ಮತ್ತು 3 ಪೂಟ್ ಓವರ್ ಬ್ರಿಡ್ಜ್ ಕಾಮಗಾರಿಗೆ ಕೇಂದ್ರ ಹೆದ್ದಾರಿ ಇಲಾಖೆ ಅನುಮೋದನೆ ನೀಡಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಕೋಟೇಶ್ವರ ಬೈಪಾಸ್ನಿಂದ ಬ್ಯಾನ್ಸ್ ಗ್ರಾನೈಟ್ ವರೆಗೆ ಮುಂದುವರೆದು ಬೀಜಾಡಿ ಕ್ರಾಸ್- 830 ಮೀ. ರಸ್ತೆ, ಅನ್ನಪೂರ್ಣ ಹೋಟೇಲ್ನಿಂದ ಸಾನ್ವಿ ಏಜೆನ್ಸಿ ಬೀಜಾಡಿ-&ಕುಂಭಾಶಿ&-ತೆಕ್ಕಟ್ಟೆ ವರೆಗೆ ಎರಡುಕಡೆಗಳಲ್ಲಿ 3500 ಮೀ. ರಸ್ತೆ, ತೆಕ್ಕಟ್ಟೆ ಸೇವಾ ಸಂಗಮ ಶಿಶು ಮಂದಿರದಿಂದ ಎರಡುಕಡೆ 1020 ಮೀ ರಸ್ತೆ, ಬ್ರಹ್ಮಾವರದ ಮಹೇಶ್ ಆಸ್ಪತ್ರೆಯಿಂದ ಎಸ್.ಎಂ.ಎಸ್ ಕಾಲೇಜುವರೆಗೆ ಎರಡು ಕಡೆ -400 ಮೀ ರಸ್ತೆ, ಸಂತೆಕಟ್ಟೆ ಇಂದ್ರ ಸರ್ವೀಸ್ ಸ್ಟೇಷನ್ನಿಂದ ಮಂದಾರ ವುಡ್ ಇಂಡಸ್ಟ್ರೀಜ್ವರೆಗೆ ಎರಡುಕಡೆ 1000 ಮೀ ರಸ್ತೆ, ಉದ್ಯಾವರ ಜಂಕ್ಷನ್ನಿಂದ ದೇಶ್ನ ಬ್ಯಾಂಕಿನವರೆಗೆ ಬಲಬದಿಯಲ್ಲಿ 325 ಮೀ. ರಸ್ತೆ, ಉದ್ಯಾವರ ಕಿಯಾ ಶೋರೂಂವರೆಗೆ- ಎರಡು ಕಡೆ 164 ಮೀ ರಸ್ತೆ, ಎಮಾರ್ಳ್ ಮಸೀದಿ ಹತ್ತಿರ -ಎರಡುಕಡೆ 2 ಕಿ.ಮೀ ರಸ್ತೆ, ಪಡುಬಿದ್ರಿ- ಬೋಸ್ಕೋ ಕಂಪೆನಿಯಿಂದ ಕಣ್ಣಾಂಗರ್ ಬೇಕರಿ ಸಮೀಪ ಬಲಬದಿಯಲ್ಲಿ 750ಮೀ ರಸ್ತೆ ನಿರ್ಮಾಣಕ್ಕೆ ಅನುಮತಿ ಲಭಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಪೂಟ್ ಓವರ್ ಬ್ರಿಡ್ಜ್
ಮಹೇಶ್ ಹಾಸ್ಪಿಟಲ್ ಬ್ರಹ್ಮಾವರ, ಉಡುಪಿ ನಿಟ್ಟೂರು, ತೆಂಕ ಎಮಾರ್ಳ್ನಲ್ಲಿ ಪೂಟ್ ಓವರ್ ಬ್ರಿಡ್ಜ್ ನಿಮಾರ್ಣ ಮಾಡಲು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅನುಮೋದನೆ ನೀಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.