ಕೊಪ್ಪಳ: ನಗರ ಹಾಗೂ ಗಂಗಾವತಿ ಕೇಂದ್ರಿಯ ವಿದ್ಯಾಲಯ ಹಾಗೂ ಕುಕನೂರು ನವೋದಯ ವಿದ್ಯಾಲಯ ಕಟ್ಟಡ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸಂಸದ ರಾಜಶೇಖರ ಹಿಟ್ನಾಳ ದೆಹಲಿಯಲ್ಲಿಕ ಬುಧವಾರ ಕೇಂದ್ರ ಸಚಿವ ಧರ್ಮೆಂದ್ರ ಪ್ರದಾನ್ಗೆ ಮನವಿ ಸಲ್ಲಿಸಿದರು.
ಕುಕನೂರು ನವೋದಯ ವಿದ್ಯಾಲಯದಲ್ಲಿ ಅನೇಕ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. 30 ವರ್ಷದ ಹಳೇ ಕಟ್ಟಡವಾಗಿದೆ. ಕೊಪ್ಪಳ ಹಾಗೂ ಗಂಗಾವತಿ ಕೇಂದ್ರಿಯ ವಿದ್ಯಾಲಯಗಳು ಹೊಸದಾಗಿ ನಿರ್ಮಾಣವಾಗುತ್ತಿವೆ. ನವೋದಯ ಶಾಲೆ ಅಭಿವೃದ್ಧಿಗೆ 118 ಕೋಟಿ ರೂ. ಹಾಗೂ ಗಂಗಾವತಿ ಮತ್ತು ಕೊಪ್ಪಳ ಕೇಂದ್ರಿಯ ವಿದ್ಯಾಲಯಗಳಿಗೆ ತಲಾ 7.5 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಜತೆಗೆ ಸಿಂಧನೂರಿನಲ್ಲಿ ಹೊಸದಾಗಿ ಕೇಂದ್ರಿಯ ವಿದ್ಯಾಲಯ ಮಂಜೂರು ಮಾಡುವಂತೆ ಒತ್ತಾಯಿಸಿದರು.