sanganna karadi 
ಜಿಲ್ಲೆ

ಸ್ವಪಕ್ಷದವರಿಂದ‌ ಸ್ವಾಭಿಮಾನಕ್ಕೆ ಧಕ್ಕೆ, ಸಂಸದ ಸಂಗಣ್ಣ ಕರಡಿ ಬೇಸರ !

ಕೊಪ್ಪಳ: ನಮ್ಮದೇ ಬಿಜೆಪಿ‌ ಸರ್ಕಾರ ಇದ್ದರೂ ಜಿಲ್ಲಾ ನ್ಯಾಯಾಲಯ ಕಟ್ಟಡ ಕಟ್ಟಲು ಆಗಲಿಲ್ಲ. ನಮ್ಮ ಸಚಿವರು ಸ್ಪಂದಿಸಲಿಲ್ಲ ಎಂದು ಸಂಸದ ಸಂಗಣ್ಣ ಕರಡಿ ಬೇಸರ ವ್ಯಕ್ತಪಡಿಸಿದರು.

ನಗರದ ಕುಷ್ಟಗಿ ರಸ್ತೆಯಲ್ಲಿನ ಜಿಲ್ಲಾ ನ್ಯಾಯಾಲಯ ಕಟ್ಟಡ ಕಾಮಗಾರಿಗೆ ಶನಿವಾರ ನಡೆದ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಮನದಾಳ ತೆರೆದಿಟ್ಟರು.

ನಮ್ಮ ಸರ್ಕಾರ ಇದ್ದರೂ ಕೋರ್ಟ್ ಕಟ್ಟಡ ಮಾಡಲಾಗಲಿಲ್ಲ. ಅಂದಿನ ಸಚಿವರಾದ ಸಿ.ಸಿ.ಪಾಟೀಲ್, ಕಾರಜೋಳ ಬಳಿ ಹೋದರು ಕೆಲಸ‌ ಆಗಲಿಲ್ಲ.

ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ. ಆದರೂ ಪಕ್ಷದ ಚೌಕಟ್ಟಿನಲ್ಲಿ ಇರುವ ಕಾರಣ ಏನು ಮಾಡಲು ಆಗಿಲ್ಲ. ಒಮ್ಮೊಮ್ಮೆ ಹೊರ ಬರಬೇಕು ಅನಿಸುತ್ತದೆ. ಆದರೂ ಅನಿವಾರ್ಯ.

ನಮ್ಮ ವಕೀಲರು ಪಿಐಎಲ್ ಹಾಕಿ ಕೋರ್ಟ್ ಕಟ್ಟಿಸಿಕೊಳ್ಳುವಂತಾಗಿದ್ದು ದುರಂತ. ಆದರೂ ಈಗ ಆರಂಭವಾಗಿರುವುದು ಖುಷಿ ತಂದಿದೆ ಎಂದರು.