ಜಿಲ್ಲೆ

ಲೋಕಸಭಾ ಚುನಾವಣೆ: ಕಾಗೇರಿಗೆ ಹತ್ತಾರು ಸವಾಲು

Uttara Kannada - Subash Hegde

ಕಾರವಾರ: ಬಿಜೆಪಿ ಹೈಕಮಾಂಡ್ ಸಾಕಷ್ಟು ಅಳೆದು, ತೂಗಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಹೆಸರನ್ನು ಘೋಷಿಸಿದೆ. ಆದರೆ, ಅವರು ಸ್ವಪಕ್ಷೀಯರಿಂದಲೇ ಅಸಮಾಧಾನ, ಅಸಹಕಾರ, ಅಪ ಪ್ರಚಾರ ಸೇರಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗಿ ಬಂದಿದೆ.
ಹೊಸ ಮುಖಕ್ಕೆ ಟಿಕೆಟ್ ನೀಡಿದಲ್ಲಿ ಗೆಲುವು ಕಷ್ಟವಾದೀತು ಎಂಬ ಸಮೀಕ್ಷೆಯೊಂದನ್ನು ಆಧರಿಸಿ, ಶಾಂತ ಸ್ವಭಾವದ ಕಾಗೇರಿಯವರಿ ಪಕ್ಷ ಮಣೆ ಹಾಕಿದೆ ಎಂಬ ಮಾಹಿತಿ ಇದೆ. ಕ್ಷೇತ್ರದಲ್ಲಿರುವ ಮೋದಿ ಅಲೆಯ ನಡುವೆಯೂ ಕಾಗೇರಿ ಅವರ ಹಾದಿ ಸುಲಭವಾಗಿಲ್ಲ.
೨೩ ವರ್ಷ ಬಿಜೆಪ ಎಂಪಿಯಾಗಿದ್ದ ಅನಂತ ಕುಮಾರ ಹೆಗಡೆ ತಮಗೆ ಟಿಕೆಟ್ ತಪ್ಪಿದ್ದರಿಂದ ಮುನಿಸಿಕೊಂಡು ಬೆಂಗಳೂರಿಗೆ ಹೋಗಿ ಕುಳಿತಿದ್ದಾರೆ. ಪಕ್ಷದ ಉಸ್ತುವಾರಿಗಳ ಸಂಧಾನದ ಯತ್ನವೂ ವಿಫಲವಾಗಿದೆ. ಈ ನಡುವೆ ಅನಂತ ಕುಮಾರ್ ತಮ್ಮ ಕಟ್ಟಾ ಬೆಂಬಲಿಗರೊಬ್ಬರನ್ನು ಪಕ್ಷೇತರವಾಗಿ ಕಣಕ್ಕೆ ಇಳಿಸುತ್ತಾರೆ ಎಂಬ ಮಾಹಿತಿ ಇದೆ. ಪಕ್ಷದ ಅಽಕೃತ ಜವಾಬ್ದಾರಿ ಇದ್ದರೂ ಅನಂತರ ನಿಕಟವರ್ತಿಗಳ್ಯಾರೂ ಇದುವರೆಗೂ ಪ್ರಚಾರಕ್ಕೆ ಇಳಿದಿಲ್ಲ. ಆಸ್ಪತ್ರೆ, ಅನಾರೋಗ್ಯದ ನೆಪ ಹೇಳಿಕೊಂಡು ಓಡಾಡುತ್ತಿದ್ದಾರೆ.
ಇನ್ನೊಂದೆಡೆ ಶಾಸಕ ಶಿವರಾಮ ಹೆಬ್ಬಾರ ಬಿಜೆಪಿಯಲ್ಲಿದ್ದೂ ಇಲ್ಲದಂತಾಗಿದ್ದಾರೆ. ಶಿರಸಿ, ಯಲ್ಲಾಪುರ, ಮುಂಡಗೋಡ ಭಾಗದಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿ, ಅವರನ್ನು ಕಾಂಗ್ರೆಸ್‌ಗೆ ಕಳಿಸಿಕೊಡುವ ಸಿದ್ಧತೆಯಲ್ಲಿ ತೊಡಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಅವರಿಂದ ಬಿಜೆಪಿಗೆ ನಷ್ಟವೇ ಹೊರತು ಯಾವುದೇ ಸಹಕಾರ ನಿರೀಕ್ಷಿಸುವಂತಿಲ್ಲ.
ಅಸಮಾಧಾನ:
ಬಿಜೆಪಿ ಅನಂತ ಕುಮಾರ ಹೆಗಡೆ ಟಿಕೆಟ್ ತಪ್ಪಿಸಿ ಹೊಸಬರಿಗೆ ಕೊಡಬಹುದಿತ್ತು. ನಾವೆಲ್ಲ ನೋಡಿದ ಹಳೆಯ ಮುಖವನ್ನೇ ಮತ್ತೊಮ್ಮೆ ಬೆಂಬಲಿಸಲು ಬೇಸರವೆನಿಸುತ್ತದೆ' ಎಂಬ ಅಸಮಾಧಾನದ ಮಾತುಗಳು ಪಕ್ಷದ ಪದಾಽಕಾರಿಗಳಿಂದಲೇ ಕೇಳಿ ಬರುತ್ತಿದೆ. ಕಾಗೇರಿ ಭಾಗವಹಿಸುವ ಪಕ್ಷದ ಸಭೆಗಳಲ್ಲಿ ವಿವಿಧ ಮೋರ್ಚಾದ ಪದಾಽಕಾರಿಗಳು ಕಾಣಿಸಿಕೊಂಡರೂ ಸಮರ್ಪಣಾ ಭಾವದಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಳ್ಳದೇ ಇರುವುದು ಗಮನಕ್ಕೆ ಬರುತ್ತಿದೆ.ನಮಗೂ ಅಸಮಾಧಾನ ಇದೆ. ಆದರೆ, ಮೋದಿ ಅವರ ಸಲುವಾಗಿ ಬರುತ್ತಿದ್ದೇವೆ' ಎಂದು ಹಲವು ಪ್ರಮುಖರು ಹೇಳಿಕೆಯನ್ನೂ ನೀಡುತ್ತಿದ್ದಾರೆ. ಈ ಎಲ್ಲ ಒಳಸುಳಿಗಳು ಬಿಜೆಪಿಗೆ ಗೆಲುವು ಸುಲಭವಿಲ್ಲ ಎಂಬುದನ್ನು ಸಾರಿ ಹೇಳುತ್ತಿವೆ.

ಕರಾವಳಿ-ಮಲೆನಾಡು ತಾರತಮ್ಯ ಆರೋಪ
ವಿಶ್ವೇಶ್ವರ ಹೆಗಡೆ ಕಾಗೇರಿ ಸುಮಾರು ೧೪ ವರ್ಷ ಕರಾವಳಿಯ ಅಂಕೋಲಾ ಹಾಗೂ ಮಲೆನಾಡಿನ ಶಿರಸಿಯ ಅರ್ಧ ಭಾಗವನ್ನು ಸೇರಿದ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ಇತ್ತೀಚಿನ ೧೫ ವರ್ಷ ಶಿರಸಿ, ಸಿದ್ದಾಪುರ ಕ್ಷೇತ್ರದ ಶಾಸಕರಾಗಿದ್ದರು. ಈ ಅವಽಯಲ್ಲಿ ೫ ವರ್ಷ ಜಿಲ್ಲಾ ಉಸ್ತುವಾರಿ ಸಚಿವರಾಗಿ, ೩ ವರ್ಷ ವಿಧಾನಸಭೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ, ಅವರು ಕ್ಷೇತ್ರ ಬಿಟ್ಟು ಬೇರೆಡೆಯ ಸಂಪರ್ಕವನ್ನು ಅಷ್ಟಾಗಿ ಇಟ್ಟುಕೊಂಡವರಲ್ಲ. ಇದರಿಂದ ಪಕ್ಷದವರೂ ಅವರನ್ನು ಇಡೀ ಜಿಲ್ಲೆಯ ನಾಯಕ ಎಂದು ಪರಿಗಣಿಸಿಯೇ ಇಲ್ಲ. ಕಾಗೇರಿ ಮಲೆನಾಡಿಗೆ ಮಹತ್ವ ನೀಡುತ್ತಾರೆ. ಕರಾವಳಿಯನ್ನು ನಿರ್ಲಕ್ಷಿಸುತ್ತಾರೆ ಎಂಬ ಭಾವನೆ ಕರಾವಳಿ ಭಾಗದ ಜನರಲ್ಲಿ ಮನೆ ಮಾಡಿಬಿಟ್ಟಿದೆ. ಅದನ್ನು ಸ್ವತಃ ಕರಾವಳಿಯ ಬಿಜೆಪಿ ನಾಯಕರೇ ಮಾಧ್ಯಮದವರ ಬಳಿ ಅಲವತ್ತುಕೊಂಡಿದ್ದಿದೆ. ತಮ್ಮ ಅಽಕಾರಾವಽಯಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆ ಮಾಡಿಕೊಂಡರು. ಕಾರವಾರ ಸಣ್ಣ ನೀರಾವರಿ ಇಲಾಖೆ ಕಚೇರಿಯನ್ನು ಶಿರಸಿಗೆ ಸ್ಥಳಾಂತರಿಸಿದರು. ಶಿರಸಿ ಪ್ರತ್ಯೇಕ ಜಿಲ್ಲೆ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಆರೋಪ ಇಲ್ಲಿನ ಜನರದ್ದು.

ಕಾಂಗ್ರೆಸ್‌ನಿಂದ ಹಿಂದುತ್ವದ ಅಜೆಂಡಾ
ಕಾಂಗ್ರೆಸ್ ಈ ಬಾರಿ ಬಿಜೆಪಿಗಿಂತ ಮುಂಚೆಯೇ ಹಿಂದುತ್ವದ ಅಜೆಂಡಾದ ಪ್ರಚಾರ ಆರಂಭಿಸಿದೆ. ಕಾಗೇರಿ ಇಸ್ಲಾಂ ಮತೀಯರು ಬಳಸುವ ಟೋಪಿ ಹಾಕಿಕೊಂಡಿರುವ ಫೋಟೋ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಅಲ್ಲದೆ, ಕಾಗೇರಿ ಮುಸ್ಲಿಂ ಸಮಾರಂಭವೊAದರಲ್ಲಿ ಮಾತನಾಡಿದ ವಿಡಿಯೋವನ್ನೂ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಪ್ರಮುಖರು ಹರಿಬಿಡುತ್ತಿದ್ದಾರೆ. ಮಾತ್ರವಲ್ಲ. ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳಕರ್ ದೇವಸ್ಥಾನಕ್ಕೆ ತೆರಳಿ ಆಶೀರ್ವಾದ ಪಡೆಯುವ ವಿಡಿಯೋಗಳನ್ನು, ಫೋಟೋಗಳನ್ನು ಕಾಗೇರಿ ಟೋಪಿ ಫೋಟೋದ ಜತೆ ಜೋಡಿಸಿ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ, ಕಾಗೇರಿ ಅವರ ವಿರುದ್ಧ ಅಪ ಪ್ರಚಾರಕ್ಕೆ ಬೇಕಾದ ಸರಕುಗಳು ಬಿಜೆಪಿ ಕೋಣೆಯಿಂದಲೇ ಹೋಗುತ್ತಿರುವುದೂ ಗುಪ್ತವಾಗಿ ಉಳಿದಿಲ್ಲ.


ಎಂಇಎಸ್ ಸ್ಪರ್ಧೆ..?
ಎಂಇಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಬೆಳಗಾವಿ ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳಲ್ಲಿ ಕಣಕ್ಕೆ ಇಳಿಸಲು ಸಿದ್ಧತೆ ನಡೆಸಿರುವ ಮಾಹಿತಿ ಇದೆ. ಈಗಾಗಲೇ ಬೆಳಗಾವಿಯಲ್ಲಿ ಈ ಸಂಬAಧ ಎಂಇಎಸ್ ಸಭೆಗಳು ನಡೆದಿವೆ. ಎಂಇಎಸ್ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಖಾನಾಪುರದಲ್ಲಿ ಪ್ರಬಲವಾಗಿದೆ. ಕಿತ್ತೂರಿನಲ್ಲಿಯೂ ಅಲ್ಪ ಪ್ರಭಾವವಿದೆ. ಎರಡು ಬಾರಿ ಖಾನಾಪುರದಿಂದ ಎಂಇಎಸ್ ಬೆಂಬಲಿತ ಶಾಸಕರಾಗಿದ್ದರು. ೨೦೧೮ ರ ವಿಧಾನಸಭಾ ಚುನಾವಣೆಯಲ್ಲಿ ಎಂಇಎಸ್ ಸ್ಪರ್ಧೆ ಮಾಡಿದ್ದರಿಂದ ಬಿಜೆಪಿಯ ಮತ ಕಸಿದಿದ್ದರು. ಈ ಬಾರಿಯೂ ಎಂಇಎಸ್ ಸ್ಪರ್ಧೆಯಿಂದ ಬಿಜೆಪಿ ಮತ ಗಳಿಕೆಗೆ ಹೊಡೆತ ಬೀಳಲಿದೆ ಎಂಬ ವಿಶ್ಲೇಷಣೆಗಳಿವೆ.

ಪ್ರಜಾಪ್ರಭುತ್ವದಲ್ಲಿ ಜನರ ಅಭಿಪ್ರಾಯಕ್ಕೆ ಮನ್ನಣೆ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಕಿಡಿಗೇಡಿಗಳು ತಪು÷್ಪ ಸಂದೇಶ ಹರಿಬಿಡುತ್ತಿದ್ದಾರೆ. ಇನ್ನು ನಾನು ಯಾವುದೇ ಸೌಲಭ್ಯವನ್ನು ಕರಾವಳಿ ಬಿಟ್ಟು ಶಿರಸಿಗೆ ಕೊಂಡೊಯ್ಯುತ್ತೇನೆ ಎಂಬ ಸಂದೇಹ ಯಾರಿಗೂ ಬೇಡ.ವಿಶ್ವೇಶ್ವರ ಹೆಗಡೆ ಕಾಗೇರಿಬಿಜೆಪಿ ಅಭ್ಯರ್ಥಿ