ಸಂಡೂರು: ವಾಲ್ಮೀಕಿ ಮತ್ತು ಮುಡಾ ಹಗರಣಗಳು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕಪ್ಪುಚುಕ್ಕೆ ಇದ್ದಂತೆ ಎಂದು ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಹೇಳಿದರು.
ಇದನ್ನೂ ಓದಿ: ಕ್ಷೇತ್ರಕ್ಕೆ ಅನುದಾನ ನೀಡದ ಕಾಂಗ್ರೆಸ್ ಸರ್ಕಾರ
ಎಸ್ಟಿ ಮೋರ್ಚಾ ನೇತೃತ್ವದಲ್ಲಿ ಸೆ.23ರಂದು ಕೈಗೊಳ್ಳಲಿರುವ ಹೋರಾಟದ ಪೂರ್ವಬಾವಿ ಸಭೆಯಲ್ಲಿ ಶುಕ್ರವಾರ ಮಾತನಾಡಿದರು.
ಎಸ್ಸಿ, ಎಸ್ಟಿ ಹಗರಣದಲ್ಲಿ 187 ಕೋಟಿ ರೂ.ಯನ್ನು ಬಳ್ಳಾರಿ ಲೋಕಸಭೆ ಸೇರಿ ತೆಲಂಗಾಣ ರಾಜ್ಯ ಸರ್ಕಾರಕ್ಕೂ ರವಾನೆ ಮಾಡಲಾಗಿದೆ.
ಸಿಎಂ ಸಿದ್ದರಾಮಯ್ಯ 89 ಕೋಟಿ ರೂ. ವಾಲ್ಮೀಕಿ ಹಗರಣವಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ಸಿನ ನೆಕ್ಕುಂಟಿ ನಾಗರಾಜ, ನಾಗೇಶ್ವರರಾವ್ ಅವರು ಡಿ.ಕೆ.ಶಿವಕುಮಾರ್ ಜತೆ ಚರ್ಚಿಸಿ ತೆಲಂಗಾಣಕ್ಕೆ ಹಣವನ್ನು ಹೆಲಿಕಾಪ್ಟರ್‌ನಲ್ಲಿ ಸಾಗಿಸಿದ್ದಾರೆ.
ಬಳ್ಳಾರಿ ಲೋಕಸಭೆ ಚುನಾವಣೆಗೆ ವಾಲ್ಮೀಕಿ ನಿಗಮದ 21 ಕೋಟಿ ರೂ. ಬಳಸಿದ್ದು, ಈ.ತುಕಾರಾಮ್ ಮತದಾರರಿಗೆ ಹಣ ಕೊಟ್ಟು ಗೆದ್ದಿದ್ದಾರೆ. ಅವರು ಕೂಡಲೇ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಪ್ರ.ಕಾರ್ಯದರ್ಶಿ ಜಿ.ಟಿ.ಪಂಪಾಪತಿ, ಎಸ್ಟಿ ಕಾರ್ಯಕಾರಿಣಿ ಸದಸ್ಯೆ ವಿಜಯಲಕ್ಷ್ಮೀ, ಜಿಲ್ಲಾಧ್ಯಕ್ಷ ರಾಮಕೃಷ್ಣ, ತಾಲೂಕು ಅಧ್ಯಕ್ಷ ಪರಶುರಾಮ್ ಪೂಜಾರ್, ಪಕ್ಷದ ಜಿಲ್ಲಾ ಪ್ರ.ಕಾರ್ಯದರ್ಶಿ ಉಡೇದ ಸುರೇಶ್, ಸಂಡೂರು ತಾಲೂಕು ಕಾರ್ಯದರ್ಶಿ ಆರ್.ಟಿ.ರಘುನಾಥ, ಪ್ರಮುಖರಾದ ಕೆ.ಪ್ರವೀಣ್, ಸೋಮನಗೌಡ, ಡಿ.ಕೃಷ್ಣಪ್ಪ, ರಾಜಶೇಖರ್ ಪಾಟೀಲ್, ಅಂತಾಪುರ ವಿ.ಎಸ್.ಶಂಕರ್, ಬಂಡ್ರಿ ನಾಗರಾಜ್, ದರೋಜಿ ರಮೇಶ್ ಇದ್ದರು.