ಮಂಗಳೂರು : ಭಯೋತ್ಪಾದನೆ ವಿರುದ್ಧ ಭಾರತದ ಒಗ್ಗಟ್ಟಿನ ಧ್ವನಿಯನ್ನು ಜಾಗತಿಕವಾಗಿ ತಲುಪಿಸುವ ಹಾಗೂ ಪಾಕಿಸ್ತಾನದ
ಮುಖವಾಡವನ್ನು ಕಳಚುವ ಸರ್ವಪಕ್ಷದ ನಿಯೋಗವನ್ನು ದಕ್ಷಿಣ ಕನ್ನಡದ ಸಂಸದನಾಗಿ ಪ್ರತಿನಿಧಿಸಲು ಅವಕಾಶ ಸಿಕ್ಕಿರುವುದು ನನಗೆ ಅತ್ಯಂತ ಹೆಮ್ಮೆ ಹಾಗೂ ತೃಪ್ತಿ ತಂದಿದೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಯುರೋಪ್‌ನ ಹಲವು ದೇಶಗಳಿಗೆ ಭೇಟಿ ನೀಡಿ ನಮ್ಮ ರಾಜತಾಂತ್ರಿಕ ಅಧಿಕಾರಿಗಳು,ಸರ್ಕಾರದ ಪ್ರತಿನಿಧಿಗಳು, ವಿವಿಧ ವಲಯದ ಚಿಂತಕರೊಂದಿಗೆ ನೇರ ಮಾತುಕತೆ ನಡೆಸುವುದಕ್ಕೆ ಅವಕಾಶ ದೊರೆತಿದೆ. ಇದರಿಂದ ಆಡಳಿತಾತ್ಮಕವಾಗಿ ಅವರ ಅನುಭವಗಳನ್ನು
ತಿಳಿಯಲು ಸಾಧ್ಯವಾಗಿದೆ. ಈ ವಿದೇಶಿ ಭೇಟಿಯು ವೈಯಕ್ತಿಕವಾಗಿ ನನ್ನ ಪಾಲಿಗೆ ಒಂದು ಹೊಸ ಅನುಭವ ಹಾಗೂ
ಅವಿಸ್ಮರಣೀಯ. ಉನ್ನತ ಮಟ್ಟದ ನಿಯೋಗದಲ್ಲಿ ಸಂಸದನಾಗಿ ತೆರಳುವುದಕ್ಕೆ ಅವಕಾಶ ನೀಡಿದ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಧನ್ಯವಾದ ಸಲ್ಲಿಸುತ್ತೇನೆ ಎಂದು ಕ್ಯಾ.ಚೌಟ ತಿಳಿಸಿದ್ದಾರೆ.
ಮೇ 22ರಂದು ದೆಹಲಿಯಿಂದ ಪ್ರಯಾಣ ಬೆಳೆಸಿದ್ದ ಸಂಸದೆ ಕನಿಮೋಳಿ ನೇತೃತ್ವದ ನಿಯೋಗವು ರಷ್ಯಾ, ಸ್ಲೊವೇನಿಯಾ, ಗ್ರೀಸ್, ಲಾಟ್ವಿಯಾ ಮತ್ತು ಸ್ಪೇನ್‌ಗಳಿಗೆ ಭೇಟಿ ನೀಡಿತ್ತು. ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟ ಈ ನಿಯೋಗದ ಸದಸ್ಯರಾಗಿದ್ದರು.