ಜಿಲ್ಲೆ

ಸಚಿವ ಕುಮಾರಸ್ವಾಮಿ ಭೇಟಿಯಾದ ಸಂಸದ ಚೌಟ

Mangaluru - Hariprasad Rai



ಮಗಳೂರು : ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಬುಧವಾರ ಭೇಟಿಯಾಗಿ ಜಿಲ್ಲೆಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಸಂಬಂಧಿಸಿ ಸಹಕಾರ ಕೋರಿದರು. ಮಂಗಳೂರಿನ ಕುದುರೆಮುಖ ಕಾರ್ಖಾನೆ, ನವ ಮಂಗಳೂರು ಬಂದರು, ಪ್ಲಾಸ್ಟಿಕ್ ಪಾರ್ಕ್ ಸಹಿತ ವಿವಿಧ ವಿಷಯಗಳ ಬಗ್ಗೆ ಸಚಿವರ ಚರ್ಚೆ ನಡೆಸಿದ ಕ್ಯಾ.ಚೌಟ ಅವರು ಮಂಗಳೂರಿಗೆ ಭೇಟಿ ನೀಡುವಂತೆ ಸಚಿವರನ್ನು ವಿನಂತಿಸಿದರು.