BN bacche goweda birthday  
ಜಿಲ್ಲೆ

ಸಂಕಷ್ಟ ಸೂತ್ರಕ್ಕೆ ಮುಂದಾಗಲಿ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ವಿಜಯಪುರ
ರಾಜ್ಯ ಸರ್ಕಾರ ತಮಿಳುನಾಡು ಸರ್ಕಾರದೊಂದಿಗೆ ಮಾತುಕತೆ ನಡೆಸಿ, ಒಡಂಬಡಿಕೆ ಮಾಡಿಕೊಂಡು ಮೇಕೆದಾಟು ಯೋಜನೆಯನ್ನು ಕಾರ್ಯಗತಗೊಳಿಸುವುದರಿಂದ 67 ಟಿಎಂಸಿ ನೀರು ಶೇಖರಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಬೆಂಗಳೂರಿಗೆ ಕುಡಿಯುವ ನೀರಿನ ಬವಣೆ ನೀಗಿಸಲು ಸಾಧ್ಯ ಎಂದು ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.
ಪಟ್ಟಣದ ಸೌಮ್ಯಕೇಶವ ಸ್ವಾಮಿ ದೇವಾಲಯದಲ್ಲಿ 83ನೇ ಜನ್ಮದಿನಾಚರಣೆ ಪ್ರಯುಕ್ತ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.
ಸಿಡಬ್ಲ್ಯೂಆರ್‌ಎ (ಕರ್ನಾಟಕ ವಾಟರ್ ರೆಗ್ಯುಲೇಟರಿ ಕಮಿಟಿ) ಸಿಡಬ್ಲ್ಯೂಎಂಎ (ಕರ್ನಾಟಕ ವಾಟರ್ ಮ್ಯಾನೇಜ್ಮೆಂಟ್ ಕಮಿಟಿ)ಗಳಲ್ಲಿ ನಮಗೆ ನ್ಯಾಯ ದೊರಕದಂತಾಗಿದ್ದು, ಮತ್ತೆ 3,000 ಕ್ಯೂಸೆಕ್ ನೀರು ಹರಿಸಲು ಸೂಚಿಸಿದೆ. ಇಂತಹ ವೇಳೆ ತಜ್ಞರ ತಂಡದೊಂದಿಗೆ ಸುಪ್ರೀಂಕೋರ್ಟ್ ಮೊರೆ ಹೋಗಿ, ಮಳೆ ಬಾರದಂತಹ ಸಂದರ್ಭದಲ್ಲಿ ಸಂಕಷ್ಟ ಸೂತ್ರ ಅಳವಡಿಕೆಗೆ ಮುಂದಾಗಬೇಕು ಎಂದರು.
ಎನ್.ಟಿ.ಸಿದ್ದರಾಜು, ಪ್ರಶಾಂತ್, ಜ್ಯೋತಿಶ್ವರಪ್ಪ, ಕೃಷ್ಣಪ್ಪ, ರೇಷ್ಮೆಇಲಾಖೆ ನಿವೃತ್ತ ಅಧಿಕಾರಿ ಮುನಿಸ್ವಾಮಿ, ಅರ್ಚಕರಾದ ಮುರಳಿಧರ್ ಭಟ್ಟಾಚಾರ್ಯ, ರಾಜು ಭಟ್ಟಾಚಾರ್ಯ ಇತರರಿದ್ದರು.