ಜಿಲ್ಲೆ

ಕರೊನಾಗೆ ಸಂಸದ ಶ್ರೀನಿವಾಸಪ್ರಸಾದ್​ರ ಆಪ್ತ ಸಹಾಯಕ ಶಂಕರ್ ಸಾವು

arunakunigal

ಮೈಸೂರು: ಕರೊನಾ ಎರಡನೇ ಅಲೆ ತಂದೊಡ್ಡಿರುವ ಸಾವು-ನೋವಿನ ಪ್ರಮಾಣ ಅಷ್ಟಿಷ್ಟಲ್ಲ. ದೊಡ್ಡವರು-ಚಿಕ್ಕವರು ಎನ್ನದೆ ದೇಶದಲ್ಲಿ ನಿತ್ಯ ಸಾವಿರಾರು ಮಂದಿ ಬಲಿಯಾಗುತ್ತಿದ್ದಾರೆ. ಈ ಸರದಿಗೆ ಚಾಮರಾಜನಗರ ಸಂಸದ ಶ್ರೀನಿವಾಸಪ್ರಸಾದ್ ಅವರ ಆಪ್ತ ಸಹಾಯಕ ಶಂಕರ್ ಕೂಡ ಸೇರಿದ್ದಾರೆ.

ಶಂಕರ್​ಗೆ ಇತ್ತೀಚಿಗೆ ಕರೊನಾ ಪಾಸಿಟಿವ್​ ಬಂದಿತ್ತು. ಹಾಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು(ಮಂಗಳವಾರ) ಕೊನೆಯುಸಿರೆಳೆದರು. ಶ್ರೀನಿವಾಸಪ್ರಸಾದ್​ರ ಆಪ್ತ ಸಹಾಯಕರಾಗಿ ಶಂಕರ್ 40 ವರ್ಷಗಳಿಂದ ಕೆಲಸ ಮಾಡುತ್ತಿದ್ದರು.