ಜಿಲ್ಲೆ

ಚಳವಳಿಗಳು ಎರಡು, ಮೂರು ದಿನಗಳಿಗೆ ಸೀಮಿತವಾಗುತ್ತಿದೆ : ಹೈಕೋರ್ಟ್ ವಕೀಲ ಬಿ.ಟಿ. ವೆಂಕಟೇಶ್ ಬೇಸರ

ಮೈಸೂರು: ಪ್ರಸ್ತುತ ಯಾವುದೇ ಚಳವಳಿಗಳು ಕೇವಲ ಒಂದೆರಡು ದಿನಗಳಿಗೆ ಮಾತ್ರ ಸೀಮಿತವಾಗುತ್ತಿದ್ದು, ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ವಿಫಲರಾಗುತ್ತಿದ್ದೇವೆ ಎಂದು ಹೈಕೋರ್ಟ್ ವಕೀಲ ಬಿ.ಟಿ. ವೆಂಕಟೇಶ್ ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಮಹಿಳಾ ದೌಜನ್ಯ ವಿರೋಧಿ ಒಕ್ಕೂಟ, ಪ್ರಗತಿಪರ ಸಂಘಟನೆಗಳ ಒಕ್ಕೂಟಗಳ ವತಿಯಿಂದ ನಗರದ ನಿತ್ಯೋತ್ಸವ ಸಭಾಂಗಣದಲ್ಲಿ ಶನಿವಾರ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ನಾಗರಿಕ ಸಂಘಟನೆಗಳ ಪಾತ್ರ-ಜವಾಬ್ದಾರಿ ಕುರಿತು ಏರ್ಪಡಿಸಿದ್ದ ಸಮಾಲೋ ಚನಾ ಸಭೆಯಲ್ಲಿ ಮಾತನಾಡಿದರು.

ಸಮಾಜದಲ್ಲಿ ನಡೆಯುವ ಅನ್ಯಾಯದ ಹೋರಾಡಲು ಒಂದು ಸಶಕ್ತ ತಂಡವನ್ನು ಕಟ್ಟುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ನಾವು 20 ಜನರ ವಕೀಲರ ತಂಡವನ್ನು ರಚಿಸುತ್ತಿದ್ದೇವೆ. ಇದರಲ್ಲಿ ತಲಾ ಹತ್ತು ಪುರುಷ ಹಾಗೂ ಮಹಿಳಾ ವಕೀಲರು ಇರಲಿದ್ದಾರೆ. ಈ ನಮ್ಮ ಕಾರ್ಯಕ್ಕೆ ಪ್ರಗತಿಪರ ಸಂಘಟನೆಗಳು ಬೆಂಬಲವಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.

ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆ ಅಧ್ಯಕ್ಷೆ ಡಾ.ರತಿರಾವ್, ಲೇಖಕ ನಾ.ದಿವಾಕರ, ಒಡನಾಡಿ ಸಂಸ್ಥೆಯ ನಿರ್ದೇಶಕರಾದ ಸ್ಟಾೃನ್ಲಿ, ಪರಶುರಾಮ್, ಚಿಂತಕ ಕಾಳಚನ್ನೇಗೌಡ, ಸಾಹಿತಿ ಕಾಳೇಗೌಡ ನಾಗವಾರ, ರಂಗಕರ್ಮಿ ಸಿ.ಬಸವಲಿಂಗಯ್ಯ ಹಾಗೂ ಇತರರು ಇದ್ದರು.