ಜಿಲ್ಲೆ

ಸ್ವಾರ್ಥದಿಂದ ಸಂಘ ಜೀವನದತ್ತ ಸಾಗಿ

Dharwada - Santosh Vaidya

ಹುಬ್ಬಳ್ಳಿ: ಪ್ರಕೃತಿಯಲ್ಲಿ ಇರುವ ಸಕಲ ಜೀವರಾಶಿಗಳು ಗಾಳಿ, ಬೆಳಕು, ಆಹಾರವನ್ನು ಸೇವಿಸುವಲ್ಲಿ ಸಮಾನ ಹಕ್ಕು ಹೊಂದಿದೆ. ಮನುಷ್ಯ ಸಂಘ ಜೀವಿ ಎಂದು ಸಮಾಜಶಾಸ್ತ್ರ ಬೋಧಿಸುತ್ತದೆ. ಆದರೆ ಪ್ರಕೃತಿ ಶಾಸ್ತ್ರವು ಮನುಷ್ಯ ಸ್ವಾರ್ಥಿ ಎಂದು ಸೂಚಿಸುತ್ತದೆ. ಇದರ ಮಧ್ಯ ಮನುಷ್ಯ ಸ್ವಾರ್ಥದಿಂದ ಸಂಘ ಜೀವನದತ್ತ ಸಾಗಬೇಕಾಗಿದೆ ಎಂದು ಪಿ.ಸಿ.ಜಾಬಿನ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪೊ›. ಎಸ್.ವಿ.ಹಿರೇಮಠ ಹೇಳಿದರು.

ಹುಬ್ಬಳ್ಳಿಯ ಶ್ರೀ ಜಗದ್ಗುರು ಮೂರುಸಾವಿರಮಠ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಐಕ್ಯೂಎಸಿ, ರಾಜ್ಯಶಾಸ್ತ್ರವಿಭಾಗ ಹಾಗೂ ಹುಬ್ಬಳ್ಳಿಯ ರೋಟರಿ ಕ್ಲಬ್ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಬೇಕೆ? ಎಂಬ ವಿಷಯದ ಮೇಲಿನ ರಾಜ್ಯಮಟ್ಟದ ಚರ್ಚಾಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ಬಹುಸಂಸ್ಕೃತಿ ಬಹುಜಾತಿ-ಮತಗಳಿಂದ ಕೂಡಿದ ಜಾತ್ಯತೀತ ರಾಷ್ಟ್ರವೆಂದು ನಾವು ಸಂವಿಧಾನದ ಪೀಠಿಕೆಯಲ್ಲಿ ಘೊಷಿಸಿಕೊಂಡಿದ್ದೇವೆ. ಆದರೆ, ಕೆಲವರು ಜಾತಿ ಮತಗಳ ಹೆಸರಲ್ಲಿ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಮನುಷ್ಯರು ಮನುಷ್ಯರಾಗಿ ಬಾಳುವುದು ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇಂಥ ಚರ್ಚೆ-ಸಂವಾದಗಳು ಅವಶ್ಯಕವಾಗಿವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಎಸ್​ಜೆಎಂವಿ ಸಂಘದ ಗೌರವ ಕಾರ್ಯಾಧ್ಯಕ್ಷ ಅರವಿಂದ ಕುಬಸದ ಮಾತನಾಡಿ, ಏಕರೂಪ ನಾಗರಿಕ ಸಂಹಿತೆಯು ಸಂಸತ್ತಿನಲ್ಲಿ ಚರ್ಚೆ ಆಗಬೇಕಿತ್ತು. ಆದರೆ ಅಲ್ಲಿ ಚರ್ಚೆ ಆಗದಿರುವುದು ವಿಷಾದದ ಸಂಗತಿಯಾಗಿದೆ. ವಿದ್ಯಾರ್ಥಿಗಳ ಅರಿವಿನಲ್ಲಿ ಹೊರಹೊಮ್ಮುವ ಈ ಕಾನೂನಾತ್ಮಕ ವಿಷಯಗಳು ಸಂಸತ್ತಿನವರೆಗೂ ಮುಟ್ಟುವ ಅವಶ್ಯಕತೆ ಇದೆ ಎಂದರು.

ಶ್ರೇಯಾ ಪ್ರಥಮ

ರಾಜ್ಯದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಚರ್ಚಾ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಶ್ರೇಯಾ ಕುದ್ದಾರ ಪ್ರಥಮ, ಯೋಗಿತಾ ದಿಗ್ಗಿಮಠ ದ್ವಿತೀಯ, ರಂಜನಾ ಹುಬರತ್ತಿ ತೃತೀಯ ಬಹುಮಾನ ಪಡೆದುಕೊಂಡರು. ಹೈಕೋರ್ಟ್ ವಕೀಲ ಎ.ವೀರಣ್ಣ, ಮಧು ಗೋಟುರಿ, ಮಾಧುರಿ ಕುಲಕರ್ಣಿ ಹಾಗೂ ಬಾಪು ಬಿರಾದರ ರಾಜ್ಯಮಟ್ಟದ ಚರ್ಚಾ ಸ್ಪರ್ಧೆಗೆ ತೀರ್ಪಗಾರರಾಗಿ ಪಾಲ್ಗೊಂಡಿದ್ದರು.

ಪ್ರಾಚಾರ್ಯು ಡಾ. ಸಿಸಿಲಿಯಾ ಡಿಕ್ರೂಜ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮಹದೇವ ಹರಿಜನ, ಐಕ್ಯೂಎಸಿ ಸಂಯೋಜಕ ಪೊ›. ಶಿವಕುಮಾರ ಬನ್ನಿಹಟ್ಟಿ, ಇತರರು ಪಾಲ್ಗೊಂಡಿದ್ದರು. ೇರಿದಂತೆ ಮಹಾವಿದ್ಯಾಲಯದ ಎಲ್ಲ ಬೋದಕ ಹಾಗೂ ಬೋದಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.