ಕಡೂರು ತಾಪಂನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಶಾಸಕ ಕೆ.ಎಸ್.ಆನಂದ್, ಭಂಡಾರಿ ಶ್ರೀನಿವಾಸ್, ಸಿ.ಎಸ್. ಪೂರ್ಣಿಮಾ, ಸಿ.ಆರ್.ಪ್ರವೀಣ್, ನಟರಾಜ್ ಇತರರಿದ್ದರು. 
ಜಿಲ್ಲೆ

ಒಗ್ಗಟ್ಟಿನಿಂದ ಮುನ್ನಡೆಯಿರಿ

ಎಸ್.ಎನ್.ರವೀಂದ್ರ

ಡೂರು: ವಾಲ್ಮೀಕಿ ಸಮುದಾಯದ ಪ್ರಗತಿಗೆ ಸಮಾಜ ಒಗ್ಗಟ್ಟಾಗಿ ನಡೆಯಬೇಕು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ತಾಪಂನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಮಾಯಣ ಮತ್ತು ಮಹಾಭಾರತ ಹಿಂದು ಧರ್ಮದ ಪೂಜನೀಯ ಗ್ರಂಥಗಳು. ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಸಾಮಾಜಿಕ ತತ್ವ ಪ್ರತಿಪಾದಿಸುತ್ತದೆ. ವಾಲ್ಮೀಕಿ ಸಮುದಾಯದವರು ತಾಲೂಕಿನಲ್ಲಿ ಗಣನೀಯ ಸಂಖ್ಯೆಯಲ್ಲಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಮುಂದೆ ಬಂದರೆ ಆ ಸಮಾಜದ ಅಭಿವೃದ್ಧಿಯಲ್ಲಿ ನನ್ನ ಸಹಕಾರ ಸದಾ ಇರುತ್ತದೆ ಎಂದರು.
ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ವಾಲ್ಮೀಕಿ ಸಮಾಜದ ಅಭಿವೃದ್ಧಿಗೆ ನಮ್ಮೆಲ್ಲರ ಸಹಕಾರವಿರುತ್ತದೆ. ಪಟ್ಟಣದ ಪ್ರಮುಖ ಸ್ಥಳ ಅಥವಾ ರಸ್ತೆಗೆ ಮಹರ್ಷಿ ವಾಲ್ಮೀಕಿ ಅವರು ಹೆಸರಿಡಲು ಪುರಸಭೆಯಲ್ಲಿ ಪ್ರಸ್ತಾಪಿಸಿ ತೀರ್ಮಾನಿಸಲಾಗುತ್ತದೆ ಎಂದರು.
ಹಾವೇರಿಯ ಅಣಜಿ ಕಾಲೇಜು ಉಪನ್ಯಾಸಕ ಎಚ್.ಇ.ರವಿಕುಮಾರ್ ಮಾತನಾಡಿದರು. ತಹಸೀಲ್ದಾರ್ ಪೂರ್ಣಿಮಾ, ತಾಪಂ ಇಒ ಪ್ರವೀಣ್, ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಬಿಸಿಲೆರೆ ರಮೇಶ್, ಗೌರವಾಧ್ಯಕ್ಷ ಕೆ.ಕೆ.ಮಂಜು, ಕಾರ್ಯಾಧ್ಯಕ್ಷ ಸೋಮನಹಳ್ಳಿ ಸಂತೋಷ್, ಸಮಾಜ ಕಲ್ಯಾಣಾಧಿಕಾರಿ ನಟರಾಜ್, ಗುಮ್ಮನಹಳ್ಳಿ ಅಶೋಕ್ ಇದ್ದರು.