ಜಿಲ್ಲೆ

ಕೆಎಲ್​ಇ ಸಿಟೈ-ಐಕೆಪಿ ನಾಲೆಡ್ಜ್ ಪಾರ್ಕ್ ಒಪ್ಪಂದ

Dharwada - Santosh Vaidya

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯಮಶೀಲತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇಲ್ಲಿಯ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ಸಿಟೈ (ಸೆಂಟರ್ ಫಾರ್ ಟೆಕ್ನಾಲಜಿ ಇನ್ನೊವೇಶನ್ ಆಂಡ್ ಎಂಟರಪ್ರಿನ್ಯೂರಶಿಪ್) ಹಾಗೂ ಹೈದರಾಬಾದ್​ನ ಐಕೆಪಿ ನಾಲೆಡ್ಜ್ ಪಾರ್ಕ್ ಪರಸ್ಪರ ಒಪ್ಪಂದ ಮಾಡಿಕೊಂಡಿವೆ.

ಉತ್ತರ ಕರ್ನಾಟಕ ಭಾಗದಲ್ಲಿ ಜೈವಿಕ ತಂತ್ರಜ್ಞಾನ ಉದ್ಯಮಶೀಲತೆ ಕುರಿತು ಸಿ-ಟೈ ನಲ್ಲಿ ಆಯೋಜಿಸಿದ್ದ ತಿಳಿವಳಿಕೆ ಕಾರ್ಯಾಗಾರದಲ್ಲಿ ಸಿ-ಟೈ ನಿರ್ದೇಶಕ ಶಿವಯೋಗಿ ತುರಮರಿ ಹಾಗೂ ಐಕೆಪಿ ನಾಲೆಡ್ಜ್ ಪಾರ್ಕ್​ನ ಕೆ-ಟೆಕ್ ಇನ್ನೊವೇಶನ್ ಹಬ್​ನ ಹಿರಿಯ ಸಮುದಾಯ ವ್ಯವಸ್ಥಾಪಕ ಸುಹ್ರುತ್ ಉಜ್ಜಿ ಒಪ್ಪಂದಕ್ಕೆ ಸಹಿ ಹಾಕಿದರು.

ಶಿವಯೋಗಿ ತುರಮರಿ ಮಾತನಾಡಿ, ಈ ಒಪ್ಪಂದವು ಜೈವಿಕ ತಂತ್ರಜ್ಞಾನದ ಆವಿಷ್ಕಾರಕ್ಕೆ ಅನುಕೂಲಕರ ವ್ಯವಸ್ಥೆಯನ್ನು ಬೆಳೆಸುವಲ್ಲಿ ಸಹಕಾರಿಯಾಗಲಿವೆ. ಈ ಪಾಲುದಾರಿಕೆಯು ಬಯೋಟೆಕ್ ಸ್ಟಾರ್ಟಅಪ್​ಗಳನ್ನು ಪೋಷಿಸುವಲ್ಲಿ ನೆರವಾಗಲಿದೆ. ಮಾರ್ಗದರ್ಶನ, ಧನಸಹಾಯ ಅವಕಾಶಗಳು ಮತ್ತು ಉದ್ಯಮ ತಜ್ಞರ ನಡುವೆ ಸಂಪರ್ಕ ಸಾಧಿಸುವಲ್ಲಿ ಪರಿಣಾಮಕಾರಿ ಸಹಯೋಗವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆಎಲ್​ಇ ತಾಂತ್ರಿಕ ವಿವಿ ರೆಜಿಸ್ಟ್ರಾರ್ ಡಾ. ಬಸವರಾಜ ಅನಾಮಿ, ಐಕೆಪಿ ಉಪಾಧ್ಯಕ್ಷ ಡಾ. ವಿಶ್ವನಾಧಂ ದುಪ್ಪಟ್ಲಾ, ಸಹ ಉಪಾಧ್ಯಕ್ಷ ಡಾ. ಪ್ರಿಯಾಂಕಣ ಮುಖರ್ಜಿ, ಅಪೂರ್ವ ಭಟ್ನಾಗರ, ಇತರರು ಇದ್ದರು.