ನುಗ್ಗೇಹಳ್ಳಿ : ಹೋಬಳಿಯ ಸಂತೇ ಶಿವರ ಅಗ್ರಹಾರ ಬೆಳಗುಲಿ ಏತ ನೀರಾವರಿ ಯೋಜನೆ ಸಾಕಾರಗೊಳ್ಳಲು ಸಾಹಿತಿ ಎಸ್ ಎಲ್ ಬೈರಪ್ಪನವರೆ ಕಾರಣ ಅವರ ಪರಿಶ್ರಮದಿಂದ ಯೋಜನೆಗೆ ಅನುದಾನ ದೊರೆತಿದೆ ಶಾಶ್ವತವಾಗಿ ಅವರ ಹೆಸರು ಉಳಿಯಲಿ ಎಂದು ಈ ಯೋಜನೆಗೆ ಡಾ. ಎಸ್ ಎಲ್ ಭೈರಪ್ಪ ಏತ ನೀರಾವರಿ ಯೋಜನೆ ಎಂದು ಹೆಸರಡಲಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಭಾನುವಾರ ತಿಳಿಸಿದರು.
ಕಾರೇಹಳ್ಳಿ ಸಮೀಪದ ಜಾಬಘಟ್ಟ ಗ್ರಾಮದ ಬಳಿ ಇರುವ ನಾಗಮಂಗಲ ವಿಭಾಗದ ಹೇಮಾವತಿ ನಾಲೆಯ ಜಾಕ್ ವೆಲ್ ನಲ್ಲಿ ನೀರೆತ್ತುವ ಮೋಟರ್ ಗೆ ಚಾಲನೆ ನೀಡಿ ಮಾತನಾಡಿದರು.
ಎಸ್ ಎಲ್ ಬೈರಪ್ಪನವರ ಪರಿಶ್ರಮದಿಂದ ಸಂತೇ ಶಿವರ ಅಗ್ರಹಾರ ಬೆಳಗುಲಿ ಹಾಗೂ ದುಗ್ಗೇನಹಳ್ಳಿ ಯಾಚನಘಟ್ಟ ಗ್ರಾಮಗಳ ಕೆರೆಗಳಿಗೆ ಈ ಯೋಜನೆಯಿಂದ ನೀರು ತುಂಬುವುದರಿಂದ ಈ ಭಾಗದ ಕೊಳವೆ ಬಾವಿಗಳ ಅಂತರ್ಜಲ ವೃದ್ಧಿಯಾಗಿ ರೈತರು ತೆಂಗು ಅಡಿಕೆ ಶುಂಠಿ ವಿವಿಧ ಬೆಳೆ ಬೆಳೆಯಲು ಅನುಕೂಲವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಕಾರೇಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ. ಎ. ಸತೀಶ್, ತಾಲೂಕು ಟಿಎಪಿಎಂಎಸ್ ನಿರ್ದೇಶಕ ಎಸ್ ಚಿರಂಜೀವಿ, ನಿವೃತ್ತ ರೇಷ್ಮೆ ಅಧಿಕಾರಿ ಕೃಷ್ಣಪ್ರಸಾದ್, ಕೃಷಿ ಪತ್ತಿನ ಮಾಜಿ ಅಧ್ಯಕ್ಷರುಗಳಾದ ಸಿ.ಡಿ. ರೇವಣ್ಣ, ಹುಲಿಕೆರೆ ಸಂಪತ್ ಕುಮಾರ್, ನಟೇಶ್, ಮಾಜಿ ಗ್ರಾಪಂ ಅಧ್ಯಕ್ಷರುಗಳಾದ ಕೆಂಪೇಗೌಡ, ಸಿ.ಜೆ. ಕುಮಾರ್, ತಾಲೂಕು ಜೆಡಿಎಸ್ ಯುವ ಮುಖಂಡ ಉದ್ಯಮಿ ಭೂವನಹಳ್ಳಿ ಯೋಗೇಶ್, ಮುಖಂಡರಾದ ಎಸ್. ಬಿ. ವೀರೇಶ್, ಕೃಷ್ಣೆಗೌಡ, ಬೆಳಗೀಹಳ್ಳಿ ಪುಟ್ಟಸ್ವಾಮಿ, ಬ್ಯಾಂಕ್ ಚಂದ್ರಣ್ಣ, ಉದ್ಯಮಿ ಚಿಪ್ಪಿನ ಚಂದ್ರು, ದ್ಯಾವಲಾಪುರ ಪ್ರಕಾಶ್, ದೊಡಗನ್ನಿ ಸತೀಶ್, ಇತರರು ಹಾಜರಿದ್ದರು.