ತುಳಸಿಗೇರಿಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಶಾಸಕ ಜೆ.ಟಿ. ಪಾಟೀಲ ಮಾತನಾಡಿದರು. ರಾಮಚಂದ್ರ ಕೊಳಚಿ, ಎನ್.ವೈ. ಕುಂದರಗಿ, ತಿಮ್ಮನಗೌಡಾ ಪಾಟೀಲ, ಸುವರ್ಣ ಕೊಳಚಿ ಮತ್ತಿತರರಿದ್ದಾರೆ. 
ಜಿಲ್ಲೆ

ಸಂಸ್ಕಾರ ಕಲಿಸುವಲ್ಲಿ ತಾಯಿ ಪಾತ್ರ ದೊಡ್ಡದು

ವಿನಯ ಆಶೋಕ ನಾಯ್ಕ

ಕಲಾದಗಿ: ಉತ್ತಮ ಸಮಾಜದ ನಿರ್ಮಾಣದ ನಿಟ್ಟಿನಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸುವುದು ಅಗತ್ಯವಾಗಿದ್ದು, ಆ ಕಾರ್ಯದಲ್ಲಿ ತಾಯಿಯ ಪಾತ್ರ ಪ್ರಮುಖವಾಗಿದೆ ಎಂದು ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಜೆ.ಟಿ.ಪಾಟೀಲ ಹೇಳಿದರು.

ಸಮೀಪದ ತುಳಸಿಗೇರಿಯಲ್ಲಿರುವ ಹೇಮ ವೇಮ ಪ್ರತಿಷ್ಠಾನದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಹಾಗೂ ಪ್ರತಿಭಾಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವೈಜ್ಞಾನಿಕವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ಅದಕ್ಕನುಗುಣವಾಗಿ ಮಕ್ಕಳನ್ನು ಶಿಕ್ಷಣವಂತರನ್ನಾಗಿಸಬೇಕು ಎಂದರು.

ನಿವೃತ್ತ ಶಿಕ್ಷಣಾಧಿಕಾರಿ ಎನ್.ವೈ. ಕುಂದರಗಿ ಮಾತನಾಡಿ, ಮಕ್ಕಳ ಸಾರ್ಮಥ್ಯಕ್ಕೆ ಅನುಗುಣವಾಗಿ ಅವರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಪೋಷಕರು ಶ್ರಮಿಸಬೇಕು ಎಂದರು.

ಹೇಮ ವೇಮ ಪ್ರತಿಷ್ಠಾನದ ಅದ್ಯಕ್ಷ ರಾಮಚಂದ್ರ ಕೊಳಚಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯಶಿಕ್ಷಕ ವೆಂಕಟೇಶ ಆರ್. ಕೊಳಚಿ, ಮುಖಂಡರಾದ ನಾರಾಯನ ಹಾದಿಮನಿ, ತಿಮ್ಮನಗೌಡಾ ಪಾಟೀಲ, ಸುವರ್ಣ ಕೊಳಚಿ ಮತ್ತಿತರರಿದ್ದರು.