ರೋಣ: ಕುಟುಂಬಪಾಲನೆ ಹಾಗೂ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ತಾಯಂದಿರ ಪಾತ್ರ ಮಹತ್ವದ್ದಾಗಿರುತ್ತದೆ ಎಂದು ಕರ್ನಾಟಕ ಉತ್ತರ ಪ್ರಾಂತ್ಯದ ಕುಟುಂಬ ಪ್ರಬೋಧನದ ಸಹ ಸಂಯೋಜಕ ಉನ್ನಿಮನಿ ನಾಗರಾಜ ಹೇಳಿದರು.
ಪಟ್ಟಣದ ಎಲ್.ಐ. ದಿಂಡೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಮಾತೃಭಾರತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಶಶಿಧರ ಎಲ್. ದಿಂಡೂರ ಮಾತನಾಡಿ, ಶಾಲೆಯ ಅಭಿವೃದ್ಧಿಯಲ್ಲಿ ತಾಯಂದಿರ ಪಾತ್ರ ನಿರ್ಣಾಯಕವಾಗಲಿದೆ. ಶಾಲೆಯ ಎಲ್ಲ ಕಾರ್ಯ ಚಟುವಟಿಕೆಯಲ್ಲಿ ತಾಯಂದಿರು ಭಾಗವಹಿಸಬೇಕು ಎಂದರು.
ಶಾಲೆಯ 200 ವಿದ್ಯಾರ್ಥಿಗಳ ತಾಯಂದಿರು ಭಾಗವಹಿಸಿದ್ದರು. ಪ್ರಬೋಧನ ಗದಗ ಜಿಲ್ಲಾ ಪ್ರಮುಖ ಮೀನಾಜಿ ಕೇಶವರಾವ್ ಜೋರಪೂರ, ಮುಖ್ಯೋಪಾಧ್ಯಾಯ ಕುಮಾರ ಬಿ. ಅಸೂಟಿ, ನಿವೇದಿತಾ ಬೇವಿನಕಟ್ಟಿ , ಇತರರಿದ್ದರು.