ಜಿಲ್ಲೆ

ಮಗಳನ್ನು ಹತ್ಯೆಗೈದ ತಾಯಿ! ಮೃತದೇಹದ ಮೇಲೆ ನಿಂತು ಆ*ತ್ಮಹತ್ಯೆ ಮಾಡಿಕೊಂಡಳು..Shivamogga

ಶಿವಮೊಗ್ಗ:  ( Shivamogga) ತಾಯಿಯೇ‌ ಮಗಳನ್ನು ಮಚ್ಚಿನಿಂದ ಹತ್ಯೆಗೈದು ಮೃತದೇಹದ ಮೇಲೆ ನಿಂತು ಆಕೆಯೂ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.  ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಯ ನರ್ಸಿಂಗ್ ಕ್ವಾಟ್ರಸ್‌ನಲ್ಲಿ  ಈ ಘನಟೆ ನಡೆದಿದೆ.

ಆರನೇ ತರಗತಿಯಲ್ಲಿ ಓದುತ್ತಿದ್ದ ಪೂರ್ವಿಕಾಳ(12) ಕೊಲೆಯಾಗಿದ್ದು, ಆಕೆಯ ತಾಯಿ ಶೃತಿ (38) ಆತ್ಮಹತ್ಯೆ ಮಾಡಿಕೊಂಡವರು. ತಾಯಿಯೇ‌ ಮಗಳನ್ನು ಮಚ್ಚಿನಿಂದ ಹತ್ಯೆಗೈದು ಮೃತದೇಹದ ಮೇಲೆ ನಿಂತು ಆಕೆಯೂ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಶೃತಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎಂಬುದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ. ಘಟನೆ ಸಮಯದಲ್ಲಿ ಗಂಡ ಆಸ್ಪತ್ರೆಯಲ್ಲಿ ನೈಟ್ ಶಿಫ್ಟ್ ಕರ್ತವ್ಯದಲ್ಲಿದ್ದು, ಬೆಳಗ್ಗೆ ಮನೆಗೆ ಬಂದು ನೀಡಿದಾಗ ವಿಷಯ ತಿಳಿದುಬಂದಿದೆ.

ಪತಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಶಿಯನ್ ಆಗಿದ್ದು ರಾತ್ರಿ ಕೆಲಸಕ್ಕೆ ಹೋಗಿದ್ದು, ಬೆಳಗ್ಗೆ ವಾಪಸ್ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.