ಜಿಲ್ಲೆ

ಮದರ್ ತೆರೆಸಾ ಶಾಲೆಯಲ್ಲಿ ರಾಮಾನುಜನ್ ಜನ್ಮದಿನ

ಕಲಬುರಗಿ: ಗೋದುತಾಯಿ ನಗರದ ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಣಿತಜ್ಞ ಶ್ರೀನಿವಾಸನ್ ರಾಮಾನುಜನ್ ಜನ್ಮದಿನದ ನಿಮಿತ್ತ ರಾಷ್ಟ್ರೀಯ ಗಣಿತ ದಿನಾಚರಣೆ, ಗಣಿತ ವಸ್ತು ಪ್ರದರ್ಶನ ಶಾಲೆಯಲ್ಲಿ ನಡೆಯಿತು. ಡಾ.ಸಂಜೀವಕುಮಾರ ಎಂ.ವೈ.ಪಾಟೀಲ್ ವಸ್ತು ಪ್ರದರ್ಶನ ಉದ್ಘಾಟಿಸಿದರು. ವಸ್ತು ಪ್ರದರ್ಶನದಲ್ಲಿ ಮಕ್ಕಳು ಉತ್ಸುಕತೆಯಿಂದ ಭಾಗವಹಿಸಿದ್ದರು. ಪ್ರದರ್ಶನಕ್ಕೆ ಸಾರ್ವಜನಿಕರು, ಪಾಲಕರು, ಹಿರಿಯರು, ಗಣ್ಯ ವ್ಯಕ್ತಿಗಳು ಆಗಮಿಸಿ ಮಕ್ಕಳ ಗಣಿತ ವಿಷಯಕ್ಕೆ ಇರುವ ಆಸಕ್ತಿ, ಸೃಜನಶೀಲತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆ ಅಧ್ಯಕ್ಷ ಬಸವರಾಜ ಭೀಮಳ್ಳಿ, ಉಪಾಧ್ಯಕ್ಷ ಎಂ.ವೈ.ಪಾಟೀಲ್, ಕಾರ್ಯದರ್ಶಿ ಶಿವಪುತ್ರಪ್ಪ ಡೆಂಕಿ ವೀಕ್ಷಣೆ ಮಾಡಿ, ಶ್ಲಾಘನೆ ವ್ಯಕ್ತಪಡಿಸಿದರು. ಪ್ರಾಂಶುಪಾಲ ನಾಗೇಂದ್ರ ಬಡಿಗೇರ ಇತರರಿದ್ದರು.