ಜಿಲ್ಲೆ

ತಾಯಿ, ತಂಗಿಯ ಮೇಲೆ ಕತ್ತಿ, ಬಡಿಗೆಯಿಂದ ಹಲ್ಲೆ


ಸಿದ್ದಾಪುರ:ತನ್ನ ತಾಯಿ ಸೇರಿ ಸಂಬಂಧಿಕರ ಮೇಲೆ ಯುವಕನೊಬ್ಬ ಕತ್ತಿ, ಬಡಿಗೆಯಿಂದ ಹಲ್ಲೆ ನಡೆಸಿದ ಘಟನೆ ತಾಲೂಕಿನ ಸೋವಿನಕೊಪ್ಪ ಕಬಗಾರದಲ್ಲಿ ನಡೆದಿದೆ.
ಗಿರೀಶ ಸುರೇಶ ನಾಯ್ಕ ಹಲ್ಲೆ ಮಾಡಿದ ಮಗನಾಗಿದ್ದಾನೆ. ಆತನ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆತ ತನ್ನ ತಾಯಿ ಸರಸ್ವತಿ ನಾಯ್ಕ,ತಂಗಿ ನಿವೇದಿತಾ ನಾಯ್ಕ, ಸೋದರ ಮಾವ ನಾರಾಯಣ ನಾಯ್ಕ ಹಾಗೂ ಅತ್ತೆ ಗಿರಿಜಾ ನಾಯ್ಕ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಗಾಯಾಳುಗಳು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.

ಮಾವ ನಾರಾಯಣ ನಾಯ್ಕ ಸಾರಾಯಿ ಕುಡಿಯುವವನಾಗಿದ್ದು, ಗಿರೀಶ ನಾಯ್ಕ ಆತನಿಗೆ ಬುದ್ದಿವಾದ ಹೇಳಿದ್ದ. ಆದರೆ, ನೀನು ನನಗೆ ಬುದ್ದಿ ಹೇಳಬೇಕಾಗಿಲ್ಲ ಎಂದು ನಾರಾಯಣ ನಾಯ್ಕ ತಮ್ಮ ಅಳಿಯನಿಗೆ ಬೈದಿದ್ದರು ಎನ್ನಲಾಗಿದೆ. ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಗುರುವಾರ ಆಗಮಿಸಿದ ಯುವಕ ನಾರಾಯಣ ನಾಯ್ಕ ಅವರ ಮೇಲೆ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಅವದನ್ನು ತಪ್ಪಿಸಲು ಹೋದ ಮನೆಯ ಹೆಂಗಸರ ಜಡೆ ಎಳೆದಾಡಿ, ಬಡಿಗೆ, ಕತ್ತಿಯಿಂದ ಹೊಡೆದು ಗಂಭೀರ ಗಾಯಗೊಳಿಸಿದ್ದಾನೆ.