ಜಿಲ್ಲೆ

ಪ್ರಿಯಕರನೊಂದಿಗೆ ತಾಯಿ ಹತ್ಯೆ ಮಾಡಿದ್ದವರು ಪೋರ್ಟ್​ ಬ್ಲೇರ್​ನಲ್ಲಿ ಸೆರೆ

ಬೆಂಗಳೂರು: ಪ್ರಿಯಕರನ ಜತೆ ಸೇರಿ ತಾಯಿ ಹತ್ಯೆ ಮಾಡಿದ್ದ ಪ್ರಕರಣವನ್ನು ಬೇಧಿಸಿರುವ ಕೆಆರ್​ಪುರ ಪೊಲೀಸರು ಇಬ್ಬರನ್ನು ಪೋರ್ಟ್​ ಬ್ಲೇರ್​ನಲ್ಲಿ ಬಂಧಿಸಿದ್ದಾರೆ.

ಅಂಡಮಾನ್​ ಮತ್ತು ನಿಕೋಬರ್​ನ ಬ್ಲೇರ್​ನಲ್ಲಿ ಕೆಆರ್​ ಪುರ ಪೊಲೀಸರು ಆರೋಪಿಗಳಾದ ಅಮೃತಾ ಹಾಗೂ ಆಕೆಯ ಪ್ರಿಯಕರ ಶ್ರೀಧರ್​ ರಾವ್​ ಎಂಬುವವರನ್ನು ಬಂಧಿಸಿದ್ದಾರೆ.

ಫೆ.2ರಂದು ಅಮೃತಾ ತನ್ನ ತಾಯಿ ನಿರ್ಮಲಾ (54)ರನ್ನು ಕೊಲೆ ಮಾಡಿದ್ದರು. ಅಲ್ಲದೆ ಸಹೋದರ ಹರೀಶ್​ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪ್ರಿಯಕರನೊಂದಿಗೆ ಬೈಕ್​ನಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಅಂಡಮಾನ್​ಗೆ ಪರಾರಿಯಾಗಿದ್ದರು.
ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಪೋರ್ಟ್​ ಬ್ಲೇರ್​ಗೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ.
ಅಮೃತಾ ಇಂಜಿನಿಯರಿಂಗ್​ ಪದವೀಧರೆ. ಈಕೆ 15 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದಳು. ಅಲ್ಲದೆ ಶ್ರೀಧರ್​ ರಾವ್​ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಇವರ ವಿವಾಹಕ್ಕೆ ತಾಯಿ ನಿರ್ಮಲಾ ಅಡ್ಡ ಬಂದ ಪರಿಣಾಮ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. (ದಿಗ್ವಿಜಯ ನ್ಯೂಸ್​)