ಶಿರಹಟ್ಟಿ: ತಾಯಿ ತನ್ನ ಮಮತೆಯಿಂದ ಮಕ್ಕಳ ಮನೋವಿಕಾಸಗೊಳಿಸಿ ಅವರ ಭವಿಷ್ಯ ಉತ್ತಮವಾಗಲು ಪ್ರೇರೇಪಿಸುತ್ತಾಳೆ ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ಪಟ್ಟಣದ ಬಿಜೆಪಿ ಕಾರ್ಯಲಯದಲ್ಲಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಮಾತಾನಾಡಿದ ಅವರು, ತಾಯಿಯ ಪಾಠಗಳು ಮತ್ತು ಉಪದೇಶಗಳು ಮಗುವಿಗೆ ಸಹಾನುಭೂತಿ ಮತ್ತು ಮಾನವೀಯತೆಯಂತಹ ಗುಣಗಳನ್ನು ಬೆಳೆಸುತ್ತವೆ. ಇದು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬೆಳೆಯಲು ನೆರವಾಗುತ್ತದೆ ಎಂದರು.
ನಂದಾ ಪಲ್ಲೇದ, ಗೀತಾ ಹಲಸೂರು, ರಾಜೇಶ್ವರಿ, ದೇವಕ್ಕ, ಸಾವಿತ್ರಿ ಪಾಶ್ಚಪುರ, ಅನುಸೂತ ಪಲ್ಲೇದ, ನಂದಾ ಕಪ್ಪತ್ತನವರ, ಶಶಿಕಲಾ ಸಂಕದಾಳ, ನಾಗರಾಜ ಲಕ್ಕುಂಡಿ, ಫಕೀರೇಶ ರಟ್ಟಿಹಳ್ಳಿ, ಮೋಹನ ಗುತ್ತೇಮ್ಮನವರ, ತಿಮ್ಮರಡ್ಡಿ ಮರಡ್ಡಿ, ಸಂದೀಪ ಕಪ್ಪತನವರ ಇತರರಿದ್ದರು.