ಜಿಲ್ಲೆ

ಹೆತ್ತ ಕಂದಮ್ಮನಿಂದ ತಾಯಿ ದೂರ!

Haveri

ಹಾವೇರಿ: ಹೆರಿಗೆಯಾದ ನಾಲ್ಕೇ ದಿನದಲ್ಲಿ ತಾಯಿ ಹಾಗೂ ಮಗು ಈಗ ಪ್ರತ್ಯೇಕವಾಗಿ ವಾಸಿಸುವಂತಹ ಸ್ಥಿತಿಯನ್ನು ಕರೊನಾ ನಿರ್ಮಾಣ ಮಾಡಿದೆ.

ತಾಲೂಕಿನ ಕರ್ಜಗಿ ಗ್ರಾಮದ 20 ವರ್ಷದ ಮಹಿಳೆ ಜು. 2ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಭಾನುವಾರ ಬೆಳಗ್ಗೆ ತಾಯಿಗೆ ಕರೊನಾ

ಪಾಸಿಟಿವ್ ಹೀಗಾಗಿ ತಾಯಿಯು ಹಸುಗೂಸಿ ನಿಂದ ದೂರ ಇರುವಂತಾಗಿದೆ. ಇನ್ನು ಮಗು ಅಕ್ಷರಶಃ ಅನಾಥ ಸ್ಥಿತಿ ಅನುಭವಿಸುತ್ತಿದೆ. ಅನಿವಾರ್ಯ

ಕಾರಣದಿಂದ ತಾಯಿಯಿಂದ ದೂರವಾಗಿರುವ ಕಂದಮ್ಮನ ಸ್ಥಿತಿ ನೋಡಿದರೆ ಎಂಥವರ ಕರುಳು ಚುರ್ ಎನ್ನದೆ ಇರದು. ಬಂಧು- ಬಳಗ ಬಂದು ಸಂಭ್ರಮಿಸುವ ಕ್ಷಣಗಳನ್ನು ಕರೊನಾ ಕಿತ್ತುಕೊಂಡಿದೆ.

ಐದಾರು ಬಾರಿ ಎದೆ ಹಾಲು: ಹಸುಗೂಸಿಗೆ ಎದೆಹಾಲು ಅವಶ್ಯ. ಹೀಗಾಗಿ ತಾಯಿಗೆ ಎನ್-95 ಮಾಸ್ಕ್ ಹಾಗೂ ಕೈಗೆ ಸ್ಯಾನಿಟೈಸರ್, ಕೈಗವಸು ಹಾಕಿಸಿ ನಿತ್ಯ ಐದಾರು ಬಾರಿ ಎದೆಹಾಲು ಕೊಡಿಸಿ ಮಗುವನ್ನು ಐಸಿಯುನಲ್ಲಿಡಲಾಗುತ್ತಿದೆ.